alex Certify ಸುಳ್ಳು ದೂರು ದಾಖಲಿಸಿ ವಂಚನೆ ಆರೋಪ: ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳು ದೂರು ದಾಖಲಿಸಿ ವಂಚನೆ ಆರೋಪ: ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್

ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಪ್ರಶಾಂತ್ ಸಂಬರಗಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಉದ್ಯಮಿ ದೇವನಾಥ್ ಅವರು ದೂರು ನೀಡಿದ್ದಾರೆ. 2008 ರಲ್ಲಿ ದೇವನಾಥ್ ಅವರು ಪ್ರಶಾಂತ್ ಸಂಬರಗಿಯಿಂದ ಸಾಲ ಪಡೆದುಕೊಂಡಿದ್ದರು. ಮನೆಯ ದಾಖಲೆ, ಖಾಲಿ ಚೆಕ್ ಶ್ಯೂರಿಟಿ ನೀಡಿದ್ದರು. 2017ರ ಡಿಸೆಂಬರ್ ನಲ್ಲಿ ದೂರುದಾರ ಹಣ ವಾಪಸ್ ಮಾಡಿದ್ದು, ಹೆಚ್ಚಿನ ಬಡ್ಡಿ ಮತ್ತು ಹಣ ನೀಡಬೇಕೆಂದು ಮನೆಯ ದಾಖಲೆ ನೀಡದೇ ಪ್ರಶಾಂತ್ ಸಂಬರಗಿ ಸತಾಯಿಸಿದ್ದಾರೆ. ಅಲ್ಲದೇ, ವಿವಿಧ ಠಾಣೆಗಳಲ್ಲಿ ದೇವನಾಥ್ ವಿರುದ್ಧ ಸುಳ್ಳು ದೂರು ನೀಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...