alex Certify ನಮ್ಮದು ಶಿಸ್ತಿನ ಪಕ್ಷ, ಇದನ್ನೆಲ್ಲ ಸಹಿಸಲ್ಲ: ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬಗ್ಗೆ ಪ್ರಹ್ಲಾದ್ ಜೋಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮದು ಶಿಸ್ತಿನ ಪಕ್ಷ, ಇದನ್ನೆಲ್ಲ ಸಹಿಸಲ್ಲ: ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬಗ್ಗೆ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ನಾಯಕರು ನೈತಿಕವಾಗಿ ಶುದ್ಧವಾಗಿರಬೇಕು. ಮಾಧ್ಯಮಗಳಲ್ಲಿ ವರದಿ ಬಗ್ಗೆ ನೋಡಿದ್ದೇನೆ. ನಮ್ಮದು ಶಿಸ್ತಿನ ಪಕ್ಷವಾಗಿದೆ. ಬಿಜೆಪಿಯಲ್ಲಿ ಇದನ್ನೆಲ್ಲ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವರದಿ ಬಂದ ಕೂಡಲೇ ತೀರ್ಮಾನಿಸಲ್ಲ. ಸತ್ಯಾಸತ್ಯತೆ ಅರಿತು ತನಿಖೆ ನಡೆಸಬೇಕು. ನಾಯಕರು ಕ್ಲೀನ್ ಆಗಿರಬೇಕು ಎಂದು ಹೇಳಿದ್ದಾರೆ.

ನಾಳೆ ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಯಬೇಕು. ಇದರ ಬಗ್ಗೆ ನನಗೇನೂ ವಿವರವಾಗಿ ಗೊತ್ತಿಲ್ಲ. ಶೇಕಡ ನೂರರಷ್ಟು ತನಿಖೆ ನಡೆಯಲಿದೆ. ಸಿಎಂ ಮತ್ತು ರಾಜ್ಯಾಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...