alex Certify ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. ಶಿವಿಕಾ ಮುಂಬಯಿ ಮೂಲದ ಉದ್ಯಮಿ ಶಿರೀಶ್ ಪೂಂಗ್ಲಿಯಾ ಪುತ್ರಿಯಾಗಿದ್ದಾರೆ.

ಜೈಪುರದಲ್ಲಿ ಆಯೋಜಿಸಲಾದ ಈ ಸಮಾರಂಭದಲ್ಲಿ ರಾಜಕಾರಣಿಗಳು, ಕ್ರಿಕೆಟರ್‌‌ಗಳು, ಚಿತ್ರನಟರು ಮತ್ತು ಫ್ಯಾಶನ್ ಲೋಕದ ಮಂದಿ ಭಾಗಿಯಾಗಿದ್ದರು.

ಫೋಷಕರ ಎದುರಲ್ಲೇ ಕಂದಮ್ಮಗಳ ದೇಹ ಛಿದ್ರ: ಭೀಕರ ಅಪಘಾತದಲ್ಲಿ ಅವಳಿ ಮಕ್ಕಳು ಸಾವು

ಬಾಲಿವುಡ್ ನಟರ ಪೈಕಿ ಅನಿಲ್ ಕಪೂರ್‌, ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು, ’ಜುಮ್ಮೇ ಕೀ ರಾತ್‌’ ಮತ್ತು ’ಸೌಂದಾ ಖಾರಾ ಖಾರಾ’ ಹಾಡಿಗೆ ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ದಬಾಂಗ್ ನಟ ನೀಲಿ ಸೂಟ್‌ನಲ್ಲಿ ಮಿಂಚುತ್ತಿದ್ದರೆ, ಶಿಲ್ಪಾ ಹೂವಿನ ಪ್ರಿಂಟಿಂಗ್ ಇರುವ ಕೆಂಪು ಔಟ್‌ಫಿಟ್‌‌ ನಲ್ಲಿ ಜಮಾಯಿಸಿದ್ದು, ಅನಿಲ್ ಕಪೂರ್‌ ಕಪ್ಪು ಬಣ್ಣದ ಅಚ್ಕಾನ್ ಧರಿಸಿದ್ದಾರೆ. ಪಟೇಲ್ ಕುಟುಂಬದೊಂದಿಗೆ ವೇದಿಕೆ ಮೇಲೆ ಈ ನಟರು ಕುಣಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...