alex Certify ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಧೆಶ್ಯಾಮ್ ಬಿಡುಗಡೆ ದಿನಾಂಕ ಬದಲಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಚಿತ್ರತಂಡ

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ರಾಧೆ ಶ್ಯಾಮ್ ಚಿತ್ರ ಸೆಟ್ಟೇರಿದಾಗಿಂದ್ಲು ಕೊರೋನಾ ಕಾಟದಿಂದ ಸಾಕಷ್ಟು ಅಡೆತಡೆಗಳನ್ನ ಎದುರಿಸಿದೆ. ಈಗ ಒಮಿಕ್ರಾನ್ ಹಾಗೂ ಕೋವಿಡ್ ಹೆಚ್ಚಳವಾಗ್ತಿರೋದ್ರಿಂದ ರಾಧೆಶ್ಯಾಮ್ ಚಿತ್ರದ ರಿಲೀಸ್ ಡೇಟ್ ಬದಲಾಗಬಹುದು ಎಂಬ ವದಂತಿಗಳು ಹೆಚ್ಚಾಗುತ್ತಿದ್ದವು.

ಸಾಹೋ ಚಿತ್ರದ ನಂತರ ಪ್ರಭಾಸ್ ರನ್ನ ಹಿರಿತೆರೆಯಲ್ಲಿ ನೋಡಲು ಕಾತುರರಾಗಿರೊ ಅಭಿಮಾನಿಗಳಲ್ಲು ಈ ಅಂತೆ ಕಂತೆಗಳಿಂದ ಗೊಂದಲ ಹೆಚ್ಚಾಗಿತ್ತು. ಆದರೆ ಈಗ ರಾಧೆಶ್ಯಾಮ್ ಚಿತ್ರತಂಡದಿಂದ ಖುಷಿಯ ಸಂಗತಿ ಹೊರಬಿದ್ದಿದ್ದು, ಈ ಮೊದಲೆ ನಿರ್ಧರಿಸಿರುವಂತೆ ರಾಧೆಶ್ಯಾಮ್ ಚಿತ್ರ ಜನವರಿ 14ರಂದು ತೆರೆಗೆ ಬರಲಿದೆ ಎಂದು ಚಿತ್ರದ ಪ್ರಚಾರಕರು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ರಾಧಾ ಕೃಷ್ಣ ಕುಮಾರ್ ನಿರ್ದೇಶನದ, ರಾಧೆ ಶ್ಯಾಮ್ ಯುರೋಪ್ನಲ್ಲಿ ನಡೆಯುವ ರೋಮ್ಯಾಂಟಿಕ್ ಕಥೆಯಾಗಿದೆ. ಕಳೆದ ವರ್ಷ ರಿಲೀಸ್ ಆದ ಟ್ರೇಲರ್ ಗೆ ಸಾಕಷ್ಟು ಪಾಸಿಟಿವ್ ರೆಸ್ಪಾನ್ಸ್ ದೊರೆತಿದೆ‌. ಕಳೆದ ಕೆಲವು ದಿನಗಳಿಂದ ರಾಧೆ ಶ್ಯಾಮ್ ಸಿನಿಮಾ ಮುಂದೂಡಿಕೆ ಬಗ್ಗೆ ವದಂತಿ ಹಬ್ಬಿತ್ತು. ಹೀಗಾಗಿ ಸಿನಿಮಾ ಪ್ರಚಾರದ ಜವಾಬ್ದಾರಿ ಹೊತ್ತಿರುವ, ಪ್ರಚಾರಕ ಜೋಡಿಯಾದ ವಂಶಿ-ಶೇಖರ್ ಈ ವದಂತಿಗಳನ್ನ ತಳ್ಳಿ ಹಾಕಿದ್ದು‌, ಜನವರಿ‌ 14ರಂದೆ ರಾಧೆಶ್ಯಾಮ್ ಚಿತ್ರ ಬಿಡುಗಡೆಯಾಗುತ್ತದೆ, ಯಾವುದೇ ವದಂತಿಗಳನ್ನ ನಂಬಬೇಡಿ ಎಂದು ರಾಧೆಶ್ಯಾಮ್ ಚಿತ್ರದ ಬಿಡುಗಡೆ ದಿನಾಂಕವನ್ನ ಮತ್ತೊಮ್ಮೆ ದೃಢಪಡಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...