alex Certify ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ ಟೀಕೆಗಗಳು ಕೇಳಿ ಬಂದಿವೆ.

500 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರದ ದೊಡ್ಡ ತರಾಗಣದ ವೇತನದ ವಿವರಗಳು ಇಂತಿವೆ:

ಪ್ರಭಾಸ್: ಪ್ರಭು ಶ್ರೀರಾಮ ಪಾತ್ರ ನಿರ್ವಹಿಸಿರುವ ಪ್ರಭಾಸ್‌ ಈ ಚಿತ್ರಕ್ಕಾಗಿ 120 ಕೊಟಿ ರೂ.ಗಳ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಕೃತಿ ಸನೋನ್: ಚಿತ್ರದಲ್ಲಿ ಜಾನಕಿ ಪಾತ್ರಧಾರಿಯಾಗಿರುವ ಕೃತಿಗೆ ಮೂರು ಕೋಟಿ ರೂ.ಗಳ ವೇತನ ನೀಡಲಾಗಿದೆ.

ಸೈಫ್ ಅಲಿ ಖಾನ್: ಚಿತ್ರದಲ್ಲಿ ರಾವಣನ ಪಾತ್ರಧಾರಿಯಾಗಿರುವ ಸೈಫ್‌ಗೆ 12 ಕೋಟಿ ರೂ.ಗಳನ್ನು ನೀಡಲಾಗಿದೆ ಎನ್ನಲಾಗಿದೆ.

ಸನ್ನಿ ಸಿಂಗ್: ಲಕ್ಷ್ಮಣನ ಪಾತ್ರಧಾರಿ ಸನ್ನಿ ಸಿಂಗ್‌ ಈ ಚಿತ್ರಕ್ಕಾಗಿ 1.5 ಕೋಟಿ ರೂ.ಗಳನ್ನು ಪಡೆದಿದ್ದಾರೆ.

ದೇವದತ್ತ ನಾಗೆ: ಚಿತ್ರದಲ್ಲಿ ಹನುಮಂತನ ಪಾತ್ರಧಾರಿಯಾಗಿರುವ ಮರಾಠಿ ನಟ ದೇವದತ್ತ ನಾಗೇ ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸೋನಾಲ್ ಚೌಹಾಣ್: ರಾವಣನ ಮಡದಿ ಮಂಡೋದರಿ ಪಾತ್ರ ಮಾಡಿರುವ ಈಕೆಗೆ 50 ಲಕ್ಷ ರೂಗಳನ್ನು ವೇತನವಾಗಿ ನೀಡಲಾಗಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...