alex Certify ತಿಂಗಳಿಗೆ ಕೇವಲ 1000 ರೂಪಾಯಿ ಹೂಡಿಕೆ ಮಾಡಿ 26 ಲಕ್ಷ ಪಡೆಯುವುದರ ಕುರಿತು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳಿಗೆ ಕೇವಲ 1000 ರೂಪಾಯಿ ಹೂಡಿಕೆ ಮಾಡಿ 26 ಲಕ್ಷ ಪಡೆಯುವುದರ ಕುರಿತು ಇಲ್ಲಿದೆ ಟಿಪ್ಸ್

ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿಗಳ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ 26 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯುವ ಅವಕಾಶವಿದೆ.

ಏರಿಕೆಯ ಹಣದುಬ್ಬರದಿಂದಾಗಿ 2022-23ರ ಮೊದಲ ತ್ರೈಮಾಸಿಕದಲ್ಲಿ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರವು ಯಥಾಸ್ಥಿತಿಯಲ್ಲಿ ಇರಿಸಿದೆ. ಹೀಗಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕ ಶೇ.7.1 ಬಡ್ಡಿದರವನ್ನು ಮುಂದುವರಿಸಲಿದೆ.

ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…!

ದೀರ್ಘಾವಧಿಯಲ್ಲಿ ಪಿಪಿಎಫ್ ಉತ್ತಮ ಆದಾಯವನ್ನು ನೀಡುತ್ತದೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ತಿಂಗಳಿಗೆ 1,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅದು ದೀರ್ಘಾವಧಿಯಲ್ಲಿ ಒಳ್ಳೆಯ ರಿಟರ್ನ್ ನೀಡುತ್ತದೆ.

ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿಗಳ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ 26 ಲಕ್ಷಕ್ಕಿಂತ ಹೆಚ್ಚು ಹಣವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಒಂದು ಲೆಕ್ಕಾಚಾರ ಇಲ್ಲಿದೆ.

ಪ್ರಸ್ತುತ ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ. ಠೇವಣಿಗಳನ್ನು ಗರಿಷ್ಠ 12 ಬಾರಿ ಇಡಲು ಅವಕಾಶವಿದೆ. ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಮೆಚ್ಯುರ್ ಆಗಲಿದೆ, ನಂತರ ಎಲ್ಲಾ ಹಣವನ್ನು ಹಿಂಪಡೆಯಬಹುದು ಅಥವಾ ಪಿಪಿಎಫ್ ಖಾತೆಯನ್ನು ಪ್ರತಿ 5 ವರ್ಷಗಳವರೆಗೆ ವಿಸ್ತರಿಸಬಹುದು.

ಮೊದಲನೆಯದಾಗಿ, ಚಿಕ್ಕ ವಯಸ್ಸಿನಲ್ಲೇ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವುದು ಸೂಕ್ತ. 20ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 60 ವರ್ಷಗಳನ್ನು ತಲುಪುವವರೆಗೆ ಖಾತೆ ಮುಂದುವರಿಸಬಹುದು.

ಮೊದಲ 15 ವರ್ಷಗಳ ಹೂಡಿಕೆ ಮಾಡಿದರೆ, 15 ವರ್ಷಗಳವರೆಗೆ ಪ್ರತಿ ತಿಂಗಳು 1,000 ರೂ.ಗಳನ್ನು ಠೇವಣಿ ಮುಂದುವರಿಸಿದರೆ 1.80 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ, 15 ವರ್ಷಗಳ ನಂತರ 3.25 ಲಕ್ಷ ರೂ. ಸಿಗಲಿದೆ. ಶೇ.7.1 ದರದಲ್ಲಿ ಬಡ್ಡಿ 1.45 ಲಕ್ಷ ರೂ. ಆಗಿರಲಿದೆ.

ಪಿಪಿಎಫ್ 5 ವರ್ಷಗಳವರೆಗೆ ವಿಸ್ತರಿಸಿ ಪ್ರತಿ ತಿಂಗಳು 1000 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ನಂತರ 5 ವರ್ಷಗಳ ನಂತರ, 3.25 ಲಕ್ಷ ರೂ. ಮೊತ್ತವು 5.32 ಲಕ್ಷಕ್ಕೆ ಹೆಚ್ಚಾಗುತ್ತದೆ.

ಪಿಪಿಎಫ್ ಅನ್ನು ಎರಡನೇ ಬಾರಿಗೆ ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿ 1000 ರೂ. ಹೂಡಿಕೆಯನ್ನು ಮುಂದುವರಿಸಿದರೆ, ನಂತರ 5 ವರ್ಷಗಳ ನಂತರ ಪಿಪಿಎಫ್ ಖಾತೆಯಲ್ಲಿನ ಹಣವು 8.24 ಲಕ್ಷ ರೂ.ಗೆ ಹೆಚ್ಚಾಗುತ್ತದೆ.

ಮೂರನೇ ಬಾರಿಗೆ 5 ವರ್ಷಗಳವರೆಗೆ ವಿಸ್ತರಿಸಿ ಒಟ್ಟು ಹೂಡಿಕೆಯ ಅವಧಿ 30 ವರ್ಷಗಳು ಮತ್ತು ಪಿಪಿಎಫ್ ಖಾತೆಯಲ್ಲಿನ ಮೊತ್ತವು 12.36 ಲಕ್ಷ ರೂ.ಗೆ ಹೆಚ್ಚಾಗುತ್ತದೆ.

ಪಿಪಿಎಫ್ ಅನ್ನು ನಾಲ್ಕನೇ ಬಾರಿಗೆ 5 ವರ್ಷಗಳವರೆಗೆ ವಿಸ್ತರಿಸಿ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, 35 ನೇ ವರ್ಷದಲ್ಲಿ, ಪಿಪಿಎಫ್ ಖಾತೆಯಲ್ಲಿನ ಹಣವು 18.15 ಲಕ್ಷಕ್ಕೆ ಹೆಚ್ಚಾಗುತ್ತದೆ.

ಪಿಪಿಎಫ್ ಖಾತೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದರೆ ತಿಂಗಳಿಗೆ ರೂ. 1000 ಹೂಡಿಕೆ ಮಾಡಿದರೆ 40ನೇ ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿನ ಹಣವು ರೂ 26.32 ಲಕ್ಷಕ್ಕೆ ಹೆಚ್ಚಾಗುತ್ತದೆ.

ಹೀಗಾಗಿ, 20ನೇ ವಯಸ್ಸಿನಲ್ಲಿ ಪ್ರಾರಂಭಿಸಿದ 1000 ರೂಪಾಯಿಗಳ ಹೂಡಿಕೆಯು ನಿವೃತ್ತಿಯವರೆಗೆ 26.32 ಲಕ್ಷ ರೂಪಾಯಿಗಳಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...