alex Certify ಪ್ರಸವದ ನಂತರ ಬಾಣಂತಿಯರನ್ನು ಕಾಡುತ್ತೆ ಖಿನ್ನತೆ; ಇಲ್ಲಿದೆ ಇದರ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸವದ ನಂತರ ಬಾಣಂತಿಯರನ್ನು ಕಾಡುತ್ತೆ ಖಿನ್ನತೆ; ಇಲ್ಲಿದೆ ಇದರ ಸಂಪೂರ್ಣ ವಿವರ

ಪ್ರಸವದ ನಂತರ ಅನೇಕ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ. ಮಗುವಿಗೆ ಜನ್ಮ ನೀಡಿದ ನಂತರ ಉಂಟಾಗುವ ಒಂದು ರೀತಿಯ ಸಮಸ್ಯೆ ಇದು. ಶೇ.15 ರಷ್ಟು ಮಹಿಳೆಯರ ಮೇಲೆ ಇದು ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಭಾವನಾತ್ಮಕ ಏರಿಳಿತಗಳನ್ನು ಅನುಭವಿಸುತ್ತಾರೆ.  ನಿರಂತರ ಅಳು, ಆಯಾಸ, ಅಪರಾಧ ಮತ್ತು ಆತಂಕದ ಭಾವನೆ ಅವರನ್ನು ಕಾಡುತ್ತದೆ. ಮಗುವನ್ನು ನೋಡಿಕೊಳ್ಳುವುದು ಅವರಿಗೆ ಕಷ್ಟವಾಗಬಹುದು.

ಮಗುವಿನ ಜನನದ ನಂತರ ವಿತ್ತೀಯ, ಭಾವನಾತ್ಮಕ, ದೈಹಿಕ ಬದಲಾವಣೆ, ಹಾರ್ಮೋನ್ ಏರಿಳಿತ ಮತ್ತು ಸಾಮಾಜಿಕ ಬದಲಾವಣೆಗಳನ್ನು ಸಹ ಮಹಿಳೆಯರು ಎದುರಿಸುತ್ತಾರೆ. ಈ ಬದಲಾವಣೆಗಳು ಪ್ರಸವಾನಂತರದ ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗಬಹುದು. ಇದನ್ನು ಔಷಧಿ ಮತ್ತು ಸಮಾಲೋಚನೆ ಮೂಲಕ ನಿವಾರಿಸಬಹುದು.

ಪ್ರಸವಾನಂತರದ ಬ್ಲೂಸ್ ಅಥವಾ ಬೇಬಿ ಬ್ಲೂಸ್

ಶೇ.50 ರಿಂದ 75 ರಷ್ಟು ಮಕ್ಕಳು ಹೆರಿಗೆಯ ನಂತರದ ಬ್ಲೂಸ್‌ನಿಂದ  ಬಳಲುತ್ತಾರೆ. ಈ ಸ್ಥಿತಿಯು ಸಾಮಾನ್ಯವಾಗಿ ಜನನದ ನಂತರ ಮೊದಲ ವಾರದಲ್ಲಿ ಒಂದರಿಂದ ನಾಲ್ಕು ದಿನಗಳಲ್ಲಿ ಸಂಭವಿಸುತ್ತದೆ. ಆಗಾಗ ಮೂಡ್ ಬದಲಾವಣೆ, ಅಳು, ಏಕಾಗ್ರತೆಯ ಕೊರತೆ, ಕಿರಿಕಿರಿ ಮತ್ತು ದುಃಖವಾಗುತ್ತದೆ. ಬೇಬಿ ಬ್ಲೂಸ್ ಹೆರಿಗೆಯಾದ ಎರಡು ಅಥವಾ ಮೂರು ದಿನಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಎರಡು ವಾರಗಳವರೆಗೆ ಇರುತ್ತದೆ.

ಪ್ರಸವನಂತರದ ಖಿನ್ನತೆ

ಪ್ರಸವದ ನಂತರದ ಖಿನ್ನತೆಯು ಬೇಬಿ ಬ್ಲೂಸ್‌ಗಿಂತ ಹೆಚ್ಚು ಗಂಭೀರವಾಗಿದೆ. ಏಳು ಪೋಷಕರಲ್ಲಿ ಒಬ್ಬರು ಇದರಿಂದ ಪ್ರಭಾವಿತರಾಗುತ್ತಾರೆ. ಅಳು, ಕಿರಿಕಿರಿ, ಆಯಾಸ, ಮಗುವನ್ನು ನೋಡಿಕೊಳ್ಳಲು ಅಸಮರ್ಥತೆ ಇವೆಲ್ಲವೂ ಬಾಣಂತಿಯನ್ನು ಕಾಡುತ್ತದೆ. ಈ ರೋಗ ಲಕ್ಷಣಗಳು ತಿಂಗಳುಗಳವರೆಗೆ ಇರಬಹುದು.

ಪ್ರಸವನಂತರದ ಮನೋರೋಗ

ಪ್ರಸವದ ನಂತರದ ಮನೋರೋಗವು ಖಿನ್ನತೆಯ ತೀವ್ರ ಸ್ವರೂಪವಾಗಿದೆ. ಇದಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ. ಇದು ಅಪರೂಪದ ಸ್ಥಿತಿಯಾಗಿದ್ದು  ಹೆರಿಗೆಯ ಸಾವಿರದಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ತೀವ್ರ ತಳಮಳ, ಗೊಂದಲ, ಹತಾಶೆ ಮತ್ತು ಅವಮಾನದ ಭಾವನೆಗಳು, ನಿದ್ರಾಹೀನತೆ, ಭ್ರಮೆ, ಹೈಪರ್‌ ಆಕ್ಟಿವಿಟಿ ಇವೆಲ್ಲವೂ ಇದರ ಲಕ್ಷಣಗಳಾಗಿವೆ.

ಪ್ರಸವದ ನಂತರದ ಖಿನ್ನತೆಯ ಲಕ್ಷಣಗಳು

ದುಃಖ, ನಿರಾಶೆ ಅಥವಾ ತಪ್ಪಿತಸ್ಥ ಭಾವನೆ.

ಅತಿಯಾದ ಆತಂಕದ ಭಾವನೆ.

ಆಲೋಚನೆ ಮತ್ತು ಏಕಾಗ್ರತೆಯ ಭಂಗ.

ಆತ್ಮಹತ್ಯೆಯ ಆಲೋಚನೆಗಳು.

ಮಗುವಿನ ಬಗ್ಗೆ ನಿರಾಸಕ್ತಿ

ಮಗುವನ್ನು ನೋಯಿಸುವ ಆಲೋಚನೆಗಳು

ಮಗು ಬೇಡ ಎಂಬ ಭಾವನೆ

ಪ್ರಸವದ ನಂತರದ ಖಿನ್ನತೆಗೆ ಕಾರಣಗಳು

ಕುಟುಂಬದ ಇತಿಹಾಸ.

ಗರ್ಭಾವಸ್ಥೆಯಲ್ಲಿ ಆರೋಗ್ಯದ ತೊಂದರೆಗಳು.

ಸಿಂಗಲ್‌ ಪೇರೆಂಟ್‌

ಈ ಸಮಸ್ಯೆಯಿಂದ ಪಾರಾಗಲು ನಿಮ್ಮ ಮತ್ತು ನಿಮ್ಮ ಮಗುವಿನ ಬಗ್ಗೆ ವಾಸ್ತವಿಕವಾಗಿರಿ. ಇತರರ ಸಹಾಯ ಕೇಳಿ. ವಾಕಿಂಗ್‌ ಮಾಡಿ. ವಿಶ್ರಾಂತಿಗಾಗಿ ಮನೆಯಿಂದ ಹೊರಬನ್ನಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಒಂಟಿಯಾಗಿರುವುದನ್ನು ತಪ್ಪಿಸಿ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...