alex Certify ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರಿ ಯೋಜನೆಗಳಿಗೆ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಪ್ರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರಿ ಯೋಜನೆಗಳಿಗೆ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಪ್ರಾರಂಭ

ನವದೆಹಲಿ: ಫಲಾನುಭವಿಗಳಿಗೆ ಸರ್ಕಾರಿ ಯೋಜನೆ ತಲುಪಿಸುವ ರಾಷ್ಟ್ರೀಯ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಅನ್ನು ಪ್ರಧಾನಮಂತ್ರಿ ನಾಳೆ ಪ್ರಾರಂಭಿಸಲಿದ್ದಾರೆ.

ಜನ ಸಮರ್ಥ ಪೋರ್ಟಲ್ ಇದಾಗಿದ್ದು, ಜೂನ್ 6 ರ ನಾಳೆ ದೆಹಲಿಯ ವಿಜ್ಞಾನ ಭವನದಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಐಕಾನಿಕ್ ವೀಕ್ ಆಚರಣೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

ಜೂನ್ 6 ರಿಂದ ಜೂನ್ 11 ರವರೆಗೆ ‘ಆಜಾದಿ ಕಾ ಅಮೃತ್ ಮಹೋತ್ಸವ’ ಭಾಗವಾಗಿ “ಐಕಾನಿಕ್ ವೀಕ್” ಆಚರಿಸಲಾಗುತ್ತಿದೆ.

ಪ್ರಧಾನಮಂತ್ರಿ ಮೋದಿ ಅವರು ಕ್ರೆಡಿಟ್-ಲಿಂಕ್ಡ್ ಸರ್ಕಾರಿ ಯೋಜನೆಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಾರಂಭಿಸಲಿದ್ದಾರೆ. ಇದು ಫಲಾನುಭವಿಗಳನ್ನು ನೇರವಾಗಿ ಸಾಲದಾತರಿಗೆ ಸಂಪರ್ಕಿಸುವ ಸರ್ಕಾರಿ ಕ್ರೆಡಿಟ್ ಯೋಜನೆಗಳನ್ನು ಸಂಪರ್ಕಿಸುವ ಒಂದು ಡಿಜಿಟಲ್ ಪೋರ್ಟಲ್ ಆಗಿದೆ.

ಸರಳ ಮತ್ತು ಸುಲಭ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಸರ್ಕಾರಿ ಪ್ರಯೋಜನಗಳನ್ನು ಒದಗಿಸುವ ಮತ್ತು ಮಾರ್ಗದರ್ಶನ ನೀಡುವ ಮೂಲಕ ವಿವಿಧ ಕ್ಷೇತ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಜನ್ ಸಮರ್ಥ್ ಪೋರ್ಟಲ್‌ ನ ಮುಖ್ಯ ಉದ್ದೇಶವನ್ನು PMO ವಿವರಿಸಿದೆ.

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ಕಳೆದ ಎಂಟು ವರ್ಷಗಳ ಸಾಧನೆ ಗುರುತಿಸುವ ಡಿಜಿಟಲ್ ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 1 ರೂ., 2 ರೂ., 5 ರೂ., 10 ರೂ., 20 ರೂ. ವಿಶೇಷ ನಾಣ್ಯಗಳನ್ನು ಕೂಡ ಬಿಡುಗಡೆ ಮಾಡಲಿದ್ದಾರೆ. ಈ ವಿಶೇಷ ಸರಣಿಯ ನಾಣ್ಯಗಳು AKAM ನ ಲೋಗೋದ ಥೀಮ್ ಹೊಂದಿರುತ್ತದೆ. ದೃಷ್ಟಿಹೀನ ವ್ಯಕ್ತಿಗಳು ಇವನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಕಾರ್ಯಕ್ರಮವನ್ನು ದೇಶಾದ್ಯಂತ 75 ಸ್ಥಳಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗುವುದು. ಪ್ರತಿ ಸ್ಥಳವನ್ನು ಮುಖ್ಯ ಸ್ಥಳದೊಂದಿಗೆ ವರ್ಚುವಲ್ ಮೋಡ್ ಮೂಲಕ ಸಂಪರ್ಕಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...