alex Certify ಕೋವಿಡ್​ ಪರೀಕ್ಷಾ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಪರೀಕ್ಷಾ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು…!

ಪ್ರಧಾನಿ ಮೋದಿ, ಅಮಿತ್​ ಶಾ, ಸೋನಿಯಾ ಗಾಂಧಿ, ಪ್ರಿಯಾಂಕ ಚೋಪ್ರಾ, ಅಕ್ಷಯ್​ ಕುಮಾರ್​​​ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಬಿಹಾರದ ರಾಜ್ಯ ಆರೋಗ್ಯ ಇಲಾಖೆ ಸಲ್ಲಿಸಿರುವ ಅಂಕಿ ಅಂಶಗಳನ್ನು ನೀವು ನಂಬೋದೇ ಆದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಇಷ್ಟೇ ಏಕೆ ಪ್ರಿಯಾಂಕಾ ಚೋಪ್ರಾ, ಅಕ್ಷಯ್​ ಕುಮಾರ್​ ಸೇರಿದಂತೆ ಅನೇಕರು ಇಲ್ಲಿ ಅರ್ವಾಲ್​ ಜಿಲ್ಲೆಯ ಸಮುದಾಯ ಕೇಂದ್ರದಲ್ಲಿ ಕೋವಿಡ್​ ಪರೀಕ್ಷೆ ಮಾಡಿಸಿದ್ದಾರಂತೆ..!

ಅಕ್ಟೋಬರ್​ 27ರಂದು ಬಿಹಾರದ ಅರ್ವಾಲ್​ ಜಿಲ್ಲೆಯ ಕರ್ಪಿ ಬ್ಲಾಕ್​​ನ ಕೋವಿಡ್​​ ಪರೀಕ್ಷಾ ವರದಿಯಲ್ಲಿ ಇಂತದ್ದೊಂದು ಅಕ್ರಮ ಬೆಳಕಿಗೆ ಬಂದಿದೆ. ಕೋವಿಡ್​ ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿಯ ಹೆಸರಿನ ಜಾಗದಲ್ಲಿ ನರೇಂದ್ರ ಮೋದಿ, ಅಮಿತ್​ ಶಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ದೇಶದ ವಿವಿಧ ಗಣ್ಯರ ಹೆಸರುಗಳನ್ನು ನಮೂದಿಸಲಾಗಿದೆ. ಅಂದಹಾಗೆ ಈ ಹೆಸರಿನ ಯಾವುದೇ ವ್ಯಕ್ತಿಗಳು ಈ ಗ್ರಾಮದಲ್ಲಿಲ್ಲ. ಅಲ್ಲದೇ ಈ ಎಲ್ಲಾ ಗಣ್ಯರ ವಿಳಾಸವನ್ನು ಅರ್ವಾಲ್​ ಜಿಲ್ಲೆ ಎಂದೇ ನಮೂದಿಸಲಾಗಿದೆ.

ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರನ್ನು ಮೂರು ಬಾರಿ ನಮೂದಿಸಲಾಗಿದೆ. ಪ್ರಧಾನಿ ಮೋದಿಯನ್ನು ಪುರನ್​ ಗ್ರಾಮದ ನಿವಾಸಿ ಎಂದು ಉಲ್ಲೇಖಿಸಲಾಗಿದೆ. ಅಮಿತ್​ ಶಾ ಹೆಸರು ಎರಡು ಬಾರಿ ನಮೂದಾಗಿದೆ. ಅಕ್ಷಯ್​​ ಕುಮಾರ್​ ಹೆಸರು ನಾಲ್ಕು ಬಾರಿ, ಪ್ರಿಯಾಂಕಾ ಚೋಪ್ರಾ ಹೆಸರನ್ನು ಬರೋಬ್ಬರಿ 6 ಬಾರಿ ಬರೆಯಲಾಗಿದೆ. ಇವರೆಲ್ಲರ ಸ್ವ್ಯಾಬ್​ ಪರೀಕ್ಷೆಯನ್ನು ಅಕ್ಟೋಬರ್​ 27ರಂದು ಮಾಡಲಾಗಿದೆ. ಹಾಗೂ ಇವರೆಲ್ಲರ ಪರೀಕ್ಷಾ ವರದಿ ನೆಗೆಟಿವ್​ ಎಂದು ಬರೆಯಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರಾಜ್ಯ ಆರೋಗ್ಯ ಇಲಾಖೆ ಮುಖ್ಯ ನಿರ್ದೇಶಕ ಸಂಜಯ್​ ಕುಮಾರ್​ ಸಿಂಗ್, ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಬ್ಬರು ಡೇಟಾ ಆಪರೇಟರ್​ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಎಫ್​​ಐಆರ್​ ಕೂಡ ದಾಖಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...