alex Certify ಅಯೋಧ್ಯೆ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ಸಾಧ್ಯತೆ

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಅಯೋಧ್ಯೆಯಲ್ಲಿ 10 ದಿನಗಳ ದೀಪಾವಳಿ ಆಚರಣೆಯನ್ನು ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜೃಂಭಣೆಯ ದೀಪೋತ್ಸವಕ್ಕೆ ಸಾಮಾನ್ಯವಾಗಿ ಸಿಎಂ ಯೋಗಿ ಆದಿತ್ಯನಾಥ್​ ಚಾಲನೆ ನೀಡುತ್ತಿದ್ದರು. ಇದು ಯೋಗಿ ಸರ್ಕಾರದ 5 ವರ್ಷದ ಆಡಳಿತದ ಅವಧಿಯ ಕೊನೆಯ ವರ್ಷವಾಗಿದೆ.

ನವೆಂಬರ್​ 3ರಂದು ನಡೆಯಲಿರುವ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಅಯೋಧ್ಯಾ ಅಭಿವೃದ್ಧಿ ಇಲಾಖೆ ಸೂಕ್ತ ತಯಾರಿ ಆರಂಭಿಸಿದೆ. ಈ ಬಾರಿ 6.5 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನೆಸ್​ ದಾಖಲೆ ರಚಿಸಲು ಪ್ಲಾನ್​ ಕೂಡ ಮಾಡಲಾಗಿದೆ.

ಪ್ರಧಾನಿ ಮೋದಿಯವರನ್ನು ಮತ್ತೆ ಅಯೋಧ್ಯೆಯಲ್ಲಿ ನೋಡಲು ಸಾಧ್ಯವಾದರೆ ನಾವೇ ಭಾಗ್ಯಶಾಲಿಗಳು ಎನಿಸಿಕೊಳ್ಳುತ್ತೇವೆ ಎಂದು ಅಯೋಧ್ಯೆ ದೀಪೋತ್ಸವ ತಯಾರಿಯ ಜವಾಬ್ದಾರಿ ವಹಿಸಿರುವ ವಿಶಾಲ್‌ ಸಿಂಗ್‌ ತಿಳಿಸಿದ್ದಾರೆ.

ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಶಾಲ್​ ಸಿಂಗ್​ ಹೇಳಿದ್ದಾರೆ. ಅವರು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...