alex Certify ತನ್ನ ಕೆಲಸವನ್ನು ಮಾಡಲು ಆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ; ಪ್ರಧಾನಿ ಮೋದಿಯವರ ಮಾತಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಕೆಲಸವನ್ನು ಮಾಡಲು ಆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ; ಪ್ರಧಾನಿ ಮೋದಿಯವರ ಮಾತಿನ ವಿಡಿಯೋ ವೈರಲ್

PM Narendra Modi Says 'I Am Convinced I Am Not Born Biologically, Getting This Energy as God Sent Me To Do His Work'; Watch Video of Prime Minister's Viral Interview With Rubika Liyaquat

ನನ್ನ ಜನ್ಮ ಜೈವಿಕವಾಗಿದೆ ಎಂದು ಭಾವಿಸಿಲ್ಲ. ಬದಲಾಗಿ ಒಂದು ಉದ್ದೇಶವನ್ನು ಸಾಧಿಸಲು, ಧ್ಯೇಯವನ್ನು ಪೂರೈಸಲು ದೇವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಹೇಳಿರುವ ಪ್ರಧಾನಿಯ ಈ ಮಾತು ಇತ್ತೀಚಿಗೆ ಭಾರೀ ವೈರಲ್ ಆಗ್ತಿದೆ.

ನ್ಯೂಸ್ 18 ಇಂಡಿಯಾದ ರುಬಿಕಾ ಲಿಯಾಖತ್ ಅವರೊಂದಿಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಈ ಹೇಳಿಕೆ ವ್ಯಾಪಕವಾಗಿ ಹರಡ್ತಿದೆ. “ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ, ದೇವರು ತನ್ನ ಕೆಲಸವನ್ನು ಮಾಡಲು ನನ್ನನ್ನು ಕಳುಹಿಸಿದ್ದರಿಂದ ನಾನು ಈ ಶಕ್ತಿಯನ್ನು ಪಡೆಯುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.

ಸತತವಾಗಿ ಕೆಲಸ ಮಾಡುತ್ತಿದ್ದರೂ ನಿಮ್ಮಲ್ಲಿ ಬಳಲಿಕೆ ಕಾಣುವುದಿಲ್ಲ, ನೀನು ಸುಸ್ತಾಗದಿರುವುದರ ಹಿಂದಿನ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಈ ರೀತಿ ಉತ್ತರಿಸಿದ್ದಾರೆ. ನರೇಂದ್ರ ಮೋದಿಯವರ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಕೋಲಾಹಲಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...