alex Certify ‘ಪಾಕ್​ ವಿರುದ್ಧ ಕೆಂಡಕಾರುವ ಪ್ರಧಾನಿ ಮೋದಿಗೆ ಚೀನಾ ಕಂಡರೆ ಭಯವೇ….?’: ಅಸಾದುದ್ದೀನ್​ ಒವೈಸಿ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಾಕ್​ ವಿರುದ್ಧ ಕೆಂಡಕಾರುವ ಪ್ರಧಾನಿ ಮೋದಿಗೆ ಚೀನಾ ಕಂಡರೆ ಭಯವೇ….?’: ಅಸಾದುದ್ದೀನ್​ ಒವೈಸಿ ಕಿಡಿ

ಹೆಚ್ಚುತ್ತಿರುವ ಇಂಧನ ದರ ಹಾಗೂ ಗಡಿ ಪ್ರದೇಶಗಳಲ್ಲಿ ಚೀನಾ ಬೆಳೆಯುತ್ತಿರುವುದು ಈ ಎರಡೂ ವಿಚಾರಗಳಲ್ಲಿ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಹೈದರಾಬಾದ್​​ನಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಒವೈಸಿ ಕಿಡಿಕಾರಿದ್ದಾರೆ.

ಪಾಕಿಸ್ತಾನ ಏನಾದರೂ ಮಾಡಿದ್ದರೆ ಪ್ರಧಾನಿ ಮೋದಿ ಎಲ್ಲರಿಗಿಂತ ಮೊದಲು ಹೇಳಿಕೆ ನೀಡುತ್ತಿದ್ದರು. ಆದರೆ ಚೀನಾ ವಿಚಾರದಲ್ಲಿ ಮಾತ್ರ ಒಂದೇ ಒಂದು ಶಬ್ದವೂ ಪ್ರಧಾನಿ ಬಾಯಿಯಿಂದ ಹೊರ ಬಂದಿಲ್ಲ ಎಂದು ಜರಿದಿದ್ದಾರೆ.

ಪಾಕ್​ ಪುಲ್ವಾಮಾ ದಾಳಿ ನಡೆಸಿದ್ದ ವೇಳೆ ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರ ದೇಶದ ಒಳಗೆ ಎಂಟ್ರಿ ಕೊಡುವ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದೀಗ ಚೀನಾ ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡ್​ ಪ್ರವೇಶಿಸಿದೆ. ಆದರೆ ಮೋದಿ ಮಾತ್ರ ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ಪ್ರಧಾನಿಗೆ ಚೀನಾದ ಬಗ್ಗೆ ಮಾತನಾಡಲು ಭಯವಿದೆ ಎಂದು ಹೇಳಿದ್ರು.

ಪಾಕಿಸ್ತಾನದ ಜೊತೆ ಟಿ 20 ಪಂದ್ಯವನ್ನಾಡಲು ಟೀಂ ಇಂಡಿಯಾಗೆ ಅನುಮತಿ ನೀಡಿದ ವಿಚಾರವಾಗಿಯೂ ಓವೈಸಿ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಶ್ಮೀರದಲ್ಲಿ ಇಸ್ಲಾಮಾಬಾದ್​ ಜನತೆ ಜೀವದೊಂದಿಗೆ ಟಿ 20 ಪಂದ್ಯವನ್ನು ಮುಂದುವರಿಸಿದೆ. ನಮ್ಮ ಯೋಧರು ಜಮ್ಮು ಕಾಶ್ಮೀರದಲ್ಲಿ ಸಾಯುತ್ತಿದ್ದರೆ, ನಾವು ಪಾಕ್​ ಜೊತೆ ಟಿ 20 ಪಂದ್ಯವಾಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...