alex Certify ಕೊರೋನಾ ಉಲ್ಬಣ ಹಿನ್ನಲೆಯಲ್ಲಿ ಮೋದಿ ಮಹತ್ವದ ನಿರ್ಧಾರ: ಬಂಗಾಳ ರ್ಯಾಲಿ ರದ್ದು, ಉನ್ನತ ಸಭೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಉಲ್ಬಣ ಹಿನ್ನಲೆಯಲ್ಲಿ ಮೋದಿ ಮಹತ್ವದ ನಿರ್ಧಾರ: ಬಂಗಾಳ ರ್ಯಾಲಿ ರದ್ದು, ಉನ್ನತ ಸಭೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದ ಮೋದಿ ದೇಶದ ಅನೇಕ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿದ ಹಿನ್ನಲೆಯಲ್ಲಿ ಎಲ್ಲಾ ರ್ಯಾಲಿಗಳನ್ನು ರದ್ದುಪಡಿಸಿದ್ದಾರೆ.

ನಾಳೆ ಕೊರೋನಾ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಕ್ರಮಕೈಗೊಳ್ಳಲಾಗುವುದು.

ಮೋದಿ ಅವರ ಪಶ್ಚಿಮಬಂಗಾಳ ರ್ಯಾಲಿಯನ್ನು ಕ್ಯಾನ್ಸಲ್ ಮಾಡಲಾಗಿದೆ. ನಾನು ಪಶ್ಚಿಮ ಬಂಗಾಳಕ್ಕೆ ಹೋಗುತ್ತಿಲ್ಲ. ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಲಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...