alex Certify BIG NEWS: ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವವರಿಗೆ ಕೇಂದ್ರದಿಂದ ನಗದು ಪುರಸ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಧಾವಿಸುವವರಿಗೆ ಕೇಂದ್ರದಿಂದ ನಗದು ಪುರಸ್ಕಾರ

ರಸ್ತೆ ಅಪಘಾತದಲ್ಲಿ ಸಿಲುಕಿರುವ ಸಂತ್ರಸ್ತರ ರಕ್ಷಣೆಗೆ, ಮೊದಲ ಒಂದು ಗಂಟೆ ಅವಧಿಯಲ್ಲಿ, ಧಾವಿಸುವ ಮಂದಿಗೆ 5,000 ರೂ.ಗಳಷ್ಟು ನಗದು ಬಹುಮಾನ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಘೋಷಿಸಿದೆ.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಸರ್ಕಾರದಿಂದ ಸಿಹಿ ಸುದ್ದಿ: ಕಾಯ್ದೆ ಮೂಲಕ ಆಧ್ಯಾದೇಶ

“ಮೋಟಾರು ವಾಹನಗಳನ್ನು ಒಳಗೊಂಡ ಭೀಕರ ಅಪಘಾತಗಳಲ್ಲಿ ಸಂತ್ರಸ್ತರ ಪ್ರಾಣ ರಕ್ಷಣೆ ಮಾಡಲು ತುರ್ತಾಗಿ ಧಾವಿಸಿ, ಗೋಲ್ಡನ್‌ ಅವರ್‌ ಒಳಗೆ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಜ್ಜನರಿಗೆ 5,000 ರೂ.ಗಳ ವರೆಗೂ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು” ಎಂದು ಸಚಿವಾಲಯ ಘೋಷಿಸಿದೆ.

ಇದರೊಂದಿಗೆ ವರ್ಷವೊಂದರಲ್ಲಿ ಈ ಪುರಸ್ಕಾರ ಪಡೆದವರ ಪೈಕಿ ಅತ್ಯುತ್ತಮರಲ್ಲಿ 10 ಮಂದಿಯನ್ನು ಆಯ್ಕೆ ಮಾಡಿ, ಒಂದು ಲಕ್ಷ ರೂ.ಗಳ ನಗದು ಬಹುಮಾನದವರೆಗೂ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ ಸೋಯಾ……?

ಇಂಥ ಸಜ್ಜನರಿಗೆ ಪಾವತಿ ಮಾಡಲೆಂದು ಆರಂಭಿಕ ಹಂತದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ತಲಾ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಸಚಿವಾಲಯ ತಿಳಿಸಿದೆ.

ಮೋಟಾರು ವಾಹನ ತಿದ್ದುಪಡಿ ಕಾಯಿದೆ, 2019ರ ನಿಯಮ 134ಎ ಪ್ರಕಾರ, ಇಂಥ ಆಪದ್ಬಾಂಧವರನ್ನು ಪುರಸ್ಕರಿಸುವ ಸಂಬಂಧ ಸೆಪ್ಟೆಂಬರ್‌ 29, 2020ರಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿದೆ.

ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಎಸ್‌ಎಸ್‌ಪಿ, ಮುಖ್ಯ ವೈದ್ಯಾಧಿಕಾರಿ, ಆರ್‌ಟಿಓಗಳ ಸಮಿತಿಯೊಂದು ಮೇಲ್ಕಂಡ ರೀತಿಯ ಆದರ್ಶಮಯ ಪ್ರಕರಣಗಳನ್ನು ಗುರುತಿಸಿ, ಅಂಥ ವ್ಯಕ್ತಿಗಳ ಹೆಸರುಗಳನ್ನು ತಂತಮ್ಮ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಶಿಫಾರಸು ಮಾಡಲಿದ್ದಾರೆ.

ಇದೇ ರೀತಿ, ರಾಜ್ಯ ಮಟ್ಟದಲ್ಲಿ ಮೇಲ್ಕಂಡ ನಿಯಮವನ್ನು ಅನುಷ್ಠಾನಗೊಳಿಸುವುದನ್ನು ನೋಡಿಕೊಳ್ಳಲೆಂದು ಆಯಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿ (ಗೃಹ), ಆಯುಕ್ತರು (ಆರೋಗ್ಯ), ಎಡಿಜಿಪಿ (ರಸ್ತೆ ಸುರಕ್ಷತೆ & ಸಂಚಾರ) ಸದಸ್ಯರಾಗಿ ಸಾರಿಗೆ ಆಯುಕ್ತರು ಹಾಗೂ ಕಾರ್ಯದರ್ಶಿಗಳ ಸದಸ್ಯರು ತ್ರೈಮಾಸಿಕ ಸಭೆಗಳನ್ನು ಹಮ್ಮಿಕೊಳ್ಳಲಿದ್ದು, ರಾಷ್ಟ್ರ ಮಟ್ಟದಲ್ಲಿ ಸನ್ಮಾನಿಸಲು ಪ್ರತಿ ವರ್ಷ ತಲಾ ಮೂರು ಮಂದಿಯ ಹೆಸರುಗಳನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಯಕ್ಕೆ ಶಿಫಾರಸು ಮಾಡಲಿವೆ.

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಗಂಡ ಹೊರ ಹೋದ ನಂತ್ರ ಮನೆಗೆ ನುಗ್ಗಿ ಮಹಿಳೆ, ಮಗು ಬರ್ಬರ ಹತ್ಯೆ

ಈ ಶಿಫಾರಸುಗಳನ್ನು ಪರಿಶೀಲಿಸಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಹೆಸರುಗಳನ್ನು ಹಾಗೂ ಪ್ರಕರಣಗಳನ್ನು ಅವಲೋಕಿಸಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ವೇಳೆ ದೆಹಲಿಯಲ್ಲಿ ಒಂದು ಲಕ್ಷ ರೂ.ಗಳ ಬಹುಮಾನದೊಂದಿಗೆ ಪ್ರಮಾಣ ಪತ್ರ ನೀಡಲು ಹೆಸರುಗಳನ್ನು ಸೂಚಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...