alex Certify ಪಿಎಂ ಇ – ಬಸ್ ಸೇವೆಗೆ ಶಿವಮೊಗ್ಗ ಆಯ್ಕೆ; ಶೀಘ್ರದಲ್ಲೇ ಸಂಚರಿಸಲಿವೆ ಸರ್ಕಾರಿ ಸಿಟಿ ಬಸ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಇ – ಬಸ್ ಸೇವೆಗೆ ಶಿವಮೊಗ್ಗ ಆಯ್ಕೆ; ಶೀಘ್ರದಲ್ಲೇ ಸಂಚರಿಸಲಿವೆ ಸರ್ಕಾರಿ ಸಿಟಿ ಬಸ್ !

ಅಂತರ ನಗರ ಇ - ಬಸ್ ಸೇವೆಗೆ ಮುನ್ನುಡಿ ಬರೆದ ಕೆಎಸ್​ಆರ್​​​ಟಿಸಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಮೊದಲ ಟ್ರಿಪ್​ಗೆ ಪ್ರಯಾಣಿಕರು ಫುಲ್ ಖುಷ್, ksrtc-has-introduced-inter-city-e ...

ಕೇಂದ್ರ ಸರ್ಕಾರ, ದೇಶದಾದ್ಯಂತ 181 ನಗರಗಳಲ್ಲಿ ಪ್ರಧಾನಮಂತ್ರಿ ಇ – ಬಸ್ ಯೋಜನೆ ಜಾರಿಗೆ ತರಲು ಮುಂದಾಗಿದ್ದು, ಈ ಯೋಜನೆಗೆ ಶಿವಮೊಗ್ಗ ನಗರ ಕೂಡಾ ಆಯ್ಕೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪರಿಸರ ಸ್ನೇಹಿ ಇ ಬಸ್ ಗಳು ಶಿವಮೊಗ್ಗ ನಗರದಲ್ಲಿ ಸಂಚರಿಸಲಿವೆ.

3 ಲಕ್ಷ ಹಾಗೂ ಅದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದ್ದು, ದೇಶದಾದ್ಯಂತ 10,000 ಬಸ್ ಗಳು ರಸ್ತೆಗೆ ಇಳಿಯಲಿವೆ.

ಶಿವಮೊಗ್ಗ ನಗರಕ್ಕೆ 50 ಬಸ್ ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದ್ದು, ಎಲ್ಲ ಬಸ್ ಗಳು ಬ್ಯಾಟರಿ ಚಾಲಿತವಾಗಿರಲಿವೆ. ಈ ಬಸ್ ಗಳು ಶಿವಮೊಗ್ಗ ನಗರದಲ್ಲಿ ಸಂಚಾರ ಆರಂಭಿಸಿದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ನಗರದಾದ್ಯಂತ ಉಚಿತವಾಗಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...