alex Certify BIG NEWS: ಮತದಾರರಿಗೆ ಆಮಿಷವೊಡ್ಡುವ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗೆ ಅರ್ಜಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತದಾರರಿಗೆ ಆಮಿಷವೊಡ್ಡುವ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗೆ ಅರ್ಜಿ..!

ವೋಟ್ ಗಳಿಸಲು ಜನಸಾಮಾನ್ಯರಿಗೆ ತರ್ಕಬದ್ಧವಲ್ಲದ ಪ್ರಮಾಣ, ಉಚಿತವಾಗಿ ಸೇವೆಗಳನ್ನು ನೀಡುತ್ತೇವೆ ಎಂದು ಪ್ರಚಾರ ಮಾಡುವ, ಹಣ ಅಥವಾ ವಸ್ತುಗಳನ್ನು ವಿತರಿಸಿ ಆಮಿಷ ನೀಡುವ ಪಕ್ಷಗಳ ಚುನಾವಣಾ ಚಿಹ್ನೆ ವಶಪಡಿಸಿಕೊಂಡು, ನೋಂದಣಿ ರದ್ದುಗೊಳಿಸಿ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶ ನೀಡುವಂತೆ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಈ ರೀತಿಯ ನಡವಳಿಕೆಯಿಂದ ಸಂವಿಧಾನದ ಉಲ್ಲಂಘನೆಯಾಗುತ್ತದೆ. ಮತದಾರರಿಂದ ಅನಗತ್ಯ ರಾಜಕೀಯ ಒಲವು ಪಡೆಯಲು ಇಂತಹ ಜನಪರ ಕ್ರಮಗಳನ್ನು ಮಾಡುವ ಪಕ್ಷಗಳನ್ನ ಸಂಪೂರ್ಣವಾಗಿ ನಿಷೇಧಿಸಬೇಕು.‌ ಭಾರತೀಯ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಚುನಾವಣೆಯ ಮೊದಲು ಸಾರ್ವಜನಿಕ ನಿಧಿಯಿಂದ ತರ್ಕಬದ್ಧವಲ್ಲ ಉಚಿತ(ಸೇವೆಗಳು, ವಸ್ತುಗಳು, ಯೋಜನೆಗಳು) ಭರವಸೆಗಳು ಮತದಾರರ ಮೇಲೆ ಅನುಚಿತವಾಗಿ ಪ್ರಭಾವ ಬೀರುತ್ತದೆ, ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳು ಮಾಡುತ್ತದೆ ಎಂದು ನ್ಯಾಯಾಲಯ ಘೋಷಿಸಲಿ ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ‌.

ವಕೀಲೆ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ಪಕ್ಷಗಳ ಇತ್ತೀಚಿನ ಪ್ರವೃತ್ತಿ ಪ್ರಜಾಸತ್ತಾತ್ಮಕ ಮೌಲ್ಯಗಳ ಉಳಿವಿಗೆ ದೊಡ್ಡ ಬೆದರಿಕೆ. ಅಷ್ಟೇ ಅಲ್ಲಾ ಸಂವಿಧಾನಕ್ಕೆ ಧಕ್ಕೆ ಎಂದು ಅರ್ಜಿಯಲ್ಲಿದೆ.‌

ಈ ಅನೈತಿಕ ಅಭ್ಯಾಸವು ಅಧಿಕಾರದಲ್ಲಿ ಉಳಿಯಲು ಅವರ ಖಜಾನೆಯಿಂದಲೆ ಮತದಾರರಿಗೆ ಲಂಚ ನೀಡುವಂತಿದೆ. ಪ್ರಜಾಪ್ರಭುತ್ವದ ತತ್ವಗಳು ಮತ್ತು ಆಚರಣೆಗಳನ್ನು ಉಳಿಸಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.‌ 1968ರ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದಲ್ಲಿ ಇದಕ್ಕೆ ಸಂಬಂಧಿಸದಂತೆ, ಹೆಚ್ಚುವರಿ ಷರತ್ತನ್ನು ಸೇರಿಸಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಚುನಾವಣೆಗೆ ಮುನ್ನ ಸಾರ್ವಜನಿಕ ನಿಧಿಯಿಂದ, ಸಾರ್ವಜನಿಕ ಉದ್ದೇಶಗಳಿಗಾಗಿ ಅಲ್ಲದ ಖಾಸಗಿ ಸರಕುಗಳು ಅಥವಾ ಸೇವೆಗಳ ಭರವಸೆ ಅಥವಾ ವಿತರಣೆಯು ಸಂವಿಧಾನದ 14 ನೇ ವಿಧಿ (ಕಾನೂನಿನ ಮುಂದೆ ಸಮಾನತೆ) ಸೇರಿದಂತೆ ಹಲವಾರು ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಲು ಅರ್ಜಿದಾರರು ಸುಪ್ರೀಂ ಕೋರ್ಟ್‌ ಅನ್ನು ಒತ್ತಾಯಿಸಿದ್ದಾರೆ. ಸಧ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ನೀಡುತ್ತಿರುವ ಭರವಸೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾಪ್ರಭುತ್ವದ ಮೂಲಾಧಾರವು ಚುನಾವಣಾ ಪ್ರಕ್ರಿಯೆಯಾಗಿದ್ದು, ಹಲವಾರು ಬಾರಿ ಚುನಾವಣೆಗಳಲ್ಲಿ ಹಣ ಹಂಚುವುದು ಮತ್ತು ಉಚಿತ ಭರವಸೆಗಳನ್ನ ನೀಡುವುದು ಆತಂಕಕಾರಿ ಮಟ್ಟವನ್ನು ತಲುಪಿವೆ ಎಂದು ಅರ್ಜಿದಾರರು ಹೇಳಿದ್ದಾರೆ. ಅನಿಯಂತ್ರಿತ ಭರವಸೆಗಳು, ಉಚಿತ ವಿತರಣೆಗಳು, ಭಾರತೀಯ ಚುನಾವಣ ಆಯೋಗದ ನ್ಯಾಯಯುತ ಚುನಾವಣೆಯ ಆದೇಶವನ್ನ ಉಲ್ಲಂಘಿಸುತ್ತದೆ. ಸಾರ್ವಜನಿಕ ಉದ್ದೇಶಗಳಿಗಾಗಿ ಅಲ್ಲದ ಖಾಸಗಿ ಸರಕು-ಸೇವೆಗಳನ್ನು ಸಾರ್ವಜನಿಕ ನಿಧಿಯಿಂದ ವಿತರಿಸುವುದು ಆರ್ಟಿಕಲ್ 14, 162, 266 (3) ಮತ್ತು 282 ಅನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...