alex Certify BIG NEWS: ಚುನಾವಣೆಗಳಲ್ಲಿ ಬ್ಯಾಲೆಟ್​ ಬಳಸಲು ಕೋರಿ ಹೈಕೋರ್ಟ್​ಗೆ ಅರ್ಜಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚುನಾವಣೆಗಳಲ್ಲಿ ಬ್ಯಾಲೆಟ್​ ಬಳಸಲು ಕೋರಿ ಹೈಕೋರ್ಟ್​ಗೆ ಅರ್ಜಿ..!

ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಇವಿಎಂಗಳನ್ನು ಬ್ಯಾನ್​ ಮಾಡಿ ಅದರ ಬದಲು ಬ್ಯಾಲೆಟ್​ ಪೇಪರ್​ಗಳನ್ನೇ ಬಳಕೆಗೆ ತರುವಂತೆ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಡಿಎನ್​ ಪಟೇಲ್​ ಹಾಗೂ ಜ್ಯೋತಿ ಸಿಂಗ್​​​ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆಯನ್ನ ಆಗಸ್ಟ್​ 3ಕ್ಕೆ ಮುಂದೂಡಿದೆ.

ವಕೀಲರಾದ ಸಿಆರ್​ ಜಯಾ ಸುಕಿನ್​ ಎಂಬವರು ಈ ಅರ್ಜಿ ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ಎದುರಾಗುವ ಚುನಾವಣೆಗಳಲ್ಲಿ ಇವಿಎಂಗಳ ಬದಲಾಗಿ ಬ್ಯಾಲೆಟ್​ ಪತ್ರಗಳನ್ನೇ ಬಳಕೆ ಮಾಡುವಂತೆ ಆದೇಶ ನೀಡುವಂತೆ ಕೋರಿದ್ದಾರೆ.

ಪ್ರಜಾಪ್ರಭುತ್ವವನ್ನ ಕಾಪಾಡುವ ಸಲುವಾಗಿ, ಈ ಹಿಂದೆ ಚುನಾವಣೆಗಳಲ್ಲಿ ಬಳಕೆಯಾಗುತ್ತಿದ್ದ ಬ್ಯಾಲೆಟ್​ ಪತ್ರಗಳನ್ನೇ ನಾವು ಮತ್ತೆ ತರಬೇಕಿದೆ. ಭಾರತದಲ್ಲಿ ಬ್ಯಾಲೆಟ್​ ಪತ್ರಗಳ ಸ್ಥಾನವನ್ನ ಇವಿಎಂಗಳು ಪಡೆದುಕೊಂಡಿವೆ. ಇಂಗ್ಲೆಂಡ್​, ಫ್ರಾನ್ಸ್​, ಜರ್ಮನಿ, ನೆದರ್​ಲ್ಯಾಂಡ್​ ಹಾಗೂ ಅಮೆರಿಕದಂತಹ ರಾಷ್ಟ್ರಗಳೇ ಇವಿಎಂ ಬಳಕೆಯನ್ನ ಬ್ಯಾನ್​ ಮಾಡಿವೆ ಎಂದು ಅರ್ಜಿದಾರ ವಕೀಲ ಜಯ ಸುಕಿನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...