ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುವ ಮಂದಿಗೆ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆರ್ಸಿಟಿಸಿ) ವಿಶೇಷ ಆಫರ್ಗಳನ್ನು ಹೊರತಂದಿದೆ.
ಕೇರಳದ ಪ್ರಮುಖ ಆಕರ್ಷಣೆಗಳಾದ ಕೊಚ್ಚಿನ್, ಮನ್ನಾರ್, ತೇಕ್ಕಡಿ, ಕುಮಾರಕೋಂ ಸೇರಿದಂತೆ ಅನೇಕ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.
5 ರಾತ್ರಿಗಳು ಹಾಗೂ 6 ಹಗಲುಗಳ ಈ ಪ್ಯಾಕೇಜ್ನ ಪ್ರವಾಸವು ಸೆಪ್ಟೆಂಬರ್ 10ರಂದು ಅಹಮದಾಬಾದ್ನಿಂದ ಆರಂಭಗೊಳ್ಳಲಿದೆ. ರೈಲ್ವೇ ಟಿಕೆಟ್ಗಳು, ಸ್ಥಳೀಯ ಸಂಚಾರ, ಹೋಟೆಲ್ ವಸತಿ ಹಾಗೂ ಆಹಾರದ ವೆಚ್ಚಗಳು ಒಳಗೊಂಡಂತೆ ಈ ಪ್ಯಾಕೇಜ್ಗೆ 23,500 ರೂ. ನಿಗದಿಯಾಗಿದೆ.
ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ, ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ
3 ಸ್ಟಾರ್ ಹೊಟೆಲ್ಗಳಲ್ಲಿ ವಸತಿ, ಎಸಿ ವಾಹನಗಳಲ್ಲಿ ಸಂಚಾರ ಹಾಗೂ ಬಹುತೇಕ ಕಡೆಗಳಲ್ಲಿ ಉಪಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಪ್ಯಾಕೇಜ್ ವೆಚ್ಚ ಒಳಗೊಂಡಿದೆ.