alex Certify ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ: ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯಾಗದ ಪತ್ನಿಗೆ ಚಿತ್ರ ಹಿಂಸೆ: ಖಾಸಗಿ ಅಂಗಕ್ಕೆ ವಸ್ತು ಹಾಕಿ ಕಿರುಕುಳ, ಪೋರ್ನ್ ಸ್ಟಾರ್ ಆಗಲು ಬಲವಂತ

ಮುಂಬೈ: ಮಹಿಳೆಯರ ಮೇಲಿನ ದೌರ್ಜನ್ಯದ ಘೋರ ಮತ್ತು ನಾಚಿಕೆಗೇಡಿನ ಅಪರಾಧದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ 29 ವರ್ಷದ ಪತ್ನಿಯ ಖಾಸಗಿ ಅಂಗದಲ್ಲಿ ವಸ್ತುವೊಂದನ್ನು ಹಾಕಿ ಅಶ್ಲೀಲ ಚಿತ್ರಕ್ಕಾಗಿ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಾರಾಷ್ಟ್ರ ರಾಜಧಾನಿ ಮುಂಬೈನ ಖಾರ್ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಇದಾದ ನಂತರ ವಿಷಯ ಬೆಳಕಿಗೆ ಬಂದಿದ್ದು, ಪ್ರಮುಖ ಹೋಟೆಲ್ ಮಾಲೀಕನ ಮಗನಾದ ಆರೋಪಿಯನ್ನು ಬಂಧಿಸಲಾಗಿದೆ.

ಫಿಸಿಯೋ ಥೆರಪಿಸ್ಟ್ ಆಗಿರುವ 29 ವರ್ಷದ ಮಹಿಳೆ 2014 ರಲ್ಲಿ ಆರೋಪಿಯೊಂದಿಗೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಗಂಡನ ಕುಟುಂಬದವರು ಇದೇ ಕಾರಣಕ್ಕೆ ಕಿರುಕುಳ ನೀಡುತ್ತಿದ್ದರು. ಆದರೆ, ವಾಸ್ತವದಲ್ಲಿ ಗಂಡನೇ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಮಹಿಳೆಯ ಚಿಕ್ಕಮ್ಮ ಹೇಳಿದ್ದಾರೆ.

ಎಫ್ಐಆರ್ ನಲ್ಲಿ ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಅಶ್ಲೀಲತೆಯ ವ್ಯಸನಿಯಾಗಿದ್ದ ಆರೋಪಿ, ತನ್ನ ಖಾಸಗಿ ಭಾಗದಲ್ಲಿ ವಸ್ತುವೊಂದನ್ನು ಸೇರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಗಂಡನಿಂದ ಚಿತ್ರ ಹಿಂಸೆ ಅನುಭವಿಸುವುದು ಕಷ್ಟವಾಗಿದ್ದರೂ, ಆಕೆ ತನ್ನ ಅಗ್ನಿಪರೀಕ್ಷೆಯನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಆತ ಮಹಿಳೆಯನ್ನು ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡಲು ಒತ್ತಾಯ ಮಾಡಿದ್ದ ಎಂದು ಹೇಳಲಾಗಿದೆ.

ಒಂದು ರಾತ್ರಿ ಮಹಿಳೆ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಅಪರಿಚಿತ ವ್ಯಕ್ತಿಯೊಂದಿಗೆ ವಿಡಿಯೋ ಕರೆ ಮಾಡಿ ನೇರ ಪ್ರಸಾರ ಮಾಡಿದ್ದಾನೆ. ಕಳೆದ ಜೂನ್ ನಲ್ಲಿ ತನ್ನ ಸಹೋದರಿಯರಿಗೆ ಮಹಿಳೆ ಈ ವಿಷಯ ತಿಳಿಸಿದಳು ಎಂದು ಆಕೆಯ ಸಂಬಂಧಿ ಹೇಳಿದ್ದಾರೆ. ಮಹಿಳೆಯನ್ನು ಗಂಡನ ಮನೆಗೆ ಕಳುಹಿಸದಿರಲು ಆಕೆಯ ತವರು ಮನೆಯವರು ತೀರ್ಮಾನಿಸಿದ್ದಾರೆ. ಈ ವಿಷಯವನ್ನು ಗಂಡನ ಮನೆಯವರಿಗೆ ಹೇಳಿದಾಗ ಆರೋಪಿಯ ತಂದೆ ತಲಾಖ್ ಕೊಡುವುದಾಗಿ ತಿಳಿಸಿದ್ದಾನೆ. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ತಲಾಖ್ ನೀಡಲು ಮುಂದಾಗಿದ್ದಲ್ಲದೇ, ಮಹಿಳೆಯ ಪಾಸ್ಪೋರ್ಟ್ ಮತ್ತು ಇತರೆ ವಸ್ತು, ದಾಖಲೆಗಳನ್ನು ಗಂಡನ ಮನೆಯವರು ಕೊಡುತ್ತಿಲ್ಲ ಎಂದು ದೂರಲಾಗಿದೆ.

ಪ್ರಕರಣದ ತನಿಖೆ ನಡೆಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆತನ ಮೊಬೈಲ್ ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪರಾಧ ಸಾಬೀತಾದಲ್ಲಿ ಸಂಬಂಧಿತ ಐಟಿ ಕಾಯ್ದೆ ಸಂಬಂಧಿತ ಸೆಕ್ಷನ್ ಗಳನ್ನು ಎಫ್ಐಆರ್ ನಲ್ಲಿ ಸೇರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...