alex Certify ʼಪಿತೃಪಕ್ಷʼ ಆಚರಣೆ ಹಿಂದಿನ ಮಹತ್ವವೇನು ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಿತೃಪಕ್ಷʼ ಆಚರಣೆ ಹಿಂದಿನ ಮಹತ್ವವೇನು ? ಇಲ್ಲಿದೆ ಮಾಹಿತಿ

ಪಿತೃಪಕ್ಷ, ಪೂರ್ವಜರ ಆತ್ಮಶಾಂತಿಗಾಗಿ, ಧಾರ್ಮಿಕ ನಂಬಿಕೆಗಳ ಪ್ರಕಾರ ದಾನ ಮತ್ತು ತರ್ಪಣ ಮಾಡುವ ಅವಧಿ. ತಲಾತಲಾಂತರದಿಂದ ಈ ಪದ್ಧತಿಯನ್ನ ಹಿಂದೂ ಧರ್ಮ ಪರಿಪಾಲಿಸುವವರು ಆಚರಿಸಿಕೊಂಡು ಬರುತ್ತಿದ್ದಾರೆ. ಪಿತೃಪಕ್ಷದ 16 ದಿನಗಳಲ್ಲಿ ಜನರು ತಮ್ಮ ಪೂರ್ವಜರ ಆಶೀರ್ವಾದ ಪಡೆಯಲು ಶ್ರಾದ್ಧ ಆಚರಣೆಗಳನ್ನ ಮಾಡುತ್ತಾರೆ. ಇದೇ ಕಾರಣಕ್ಕೆ ಶ್ರಾದ್ಧಪಕ್ಷ ಎಂದು ಕೂಡ ಹೇಳಲಾಗುತ್ತೆ.

ಭಾದ್ರಪದ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಆಶ್ವಿಜ ಮಾಸದ ಅಮವಾಸ್ಯೆಯವರೆಗೂ ಇರುವ ಈ ಪಿತೃಪಕ್ಷ, ಈ ಬಾರಿ ಸೆಪ್ಟೆಂಬರ್ 30ರಿಂದ ಪ್ರಾರಂಭವಾಗಿ ಅಕ್ಟೋಬರ್ 15ರವರೆಗೆ ಇರುತ್ತೆ ಎಂದು ಪಂಚಾಂಗದಲ್ಲಿ ತಿಳಿಸಲಾಗಿದೆ.

ಈ ಪಿತೃಪಕ್ಷದಂದು ಇಹಲೋಕ ತ್ಯಜಿಸಿದ್ದ ಹಿರಿಯರು ಮತ್ತೆ ಭೂಲೋಕಕ್ಕೆ ಭೇಟಿ ಕೊಡುತ್ತಾರೆ, ಆ ಸಮಯದಲ್ಲಿ ಅವರ ಕುಟುಂಬದವರು ಏನೇನು ತರ್ಪಣ ಮಾಡುತ್ತಾರೋ, ಅದೆಲ್ಲವನ್ನೂ ಅವರು ಖುಷಿಯಿಂದ ಸ್ವೀಕರಿಸುತ್ತಾರೆ ಅನ್ನೊ ನಂಬಿಕೆ ಇದೆ.

ಅಷ್ಟೆ ಅಲ್ಲ ಪಿಂಡದಾನ, ಬ್ರಾಹ್ಮಣರಿಗೆ ದಾನ ಮಾಡುವುದು ಸಹ ಶ್ರೇಷ್ಠ ಅನ್ನಲಾಗುತ್ತೆ. ಅಲ್ಲದೇ ಈ ಪಕ್ಷವು ಜಾತಕದಲ್ಲಿ ಪಿತೃ ದೋಷವನ್ನು ತೆಗೆದುಹಾಕಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ದಿನ ಪೂರ್ವಜರನ್ನು ಸಂತುಷ್ಠಿಗೊಳಿಸೋ ಕಾಲ ಎಂಬ ನಂಬಿಕೆ ಇದೆ.‌

ಪಿತೃ ಪಕ್ಷದ ಸಮಯದಲ್ಲಿ ಶುಭ ಕಾರ್ಯಗಳಿಗೆ ಸಂಪೂರ್ಣ ನಿಷೇಧ. ಹಾಗೂ ಗೃಹ ಪ್ರವೇಶ, ಕ್ಷೌರ ಮತ್ತು ಹೊಸ ಮನೆ ಅಥವಾ ವಾಹನ ಖರೀದಿ ಮಾಡುವುದಿಲ್ಲ. ಜೊತೆಗೆ ಹೊಸ ಬಟ್ಟೆ ಖರೀದಿಸುವುದು ಮತ್ತು ಧರಿಸುವುದನ್ನು ತಪ್ಪಿಸಬೇಕು. ಮತ್ತೊಂದೆಡೆ ಪಿತೃ ಪಕ್ಷದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸಾಹಾರ ಸೇವಿಸಬಾರದು. ಹೊಸ ಗೃಹ ಪ್ರವೇಶದಂತಹ ಶುಭ ಕಾರ್ಯಕ್ರಮಗಳನ್ನು ಈ ದಿನಗಳಲ್ಲಿ ಮಾಡಬಾರದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...