alex Certify ದಿನಕ್ಕೊಂದು ಬಾಳೆಹಣ್ಣು ತಿನ್ನುವವರಿಗೆಂದೇ ಹೀಗೊಂದು ವಿಶೇಷ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೊಂದು ಬಾಳೆಹಣ್ಣು ತಿನ್ನುವವರಿಗೆಂದೇ ಹೀಗೊಂದು ವಿಶೇಷ ಪ್ಲಾನ್

ಆರೋಗ್ಯ ದೃಷ್ಟಿಯಿಂದ ಬಾಳೆಹಣ್ಣುಗಳು ತುಂಬಾನೇ ಪ್ರಯೋಜನಕಾರಿ ಆಹಾರವಾಗಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹಾಗೂ ಫೈಬರ್​ ಅಂಶ ಹೇರಳವಾಗಿ ಇರೋದ್ರಿಂದ ಇದು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾಗಿದೆ.

ಅಲ್ಲದೇ ವಿಟಾಮಿನ್​ ಬಿ 6, ವಿಟಾಮಿನ್​ ಸಿ ಹೀಗೆ ಇನ್ನೂ ಅಗಾಧ ಉಪಯುಕ್ತ ಅಂಶಗಳು ಇದರಲ್ಲಿ ಅಡಗಿದೆ. ಬಾಳೆಹಣ್ಣಿನಿಂದ ಇಷ್ಟೆಲ್ಲ ಲಾಭವಿದೆ ನಿಜ. ಆದರೆ ಅಂಗಡಿಯಿಂದ ಖರೀದಿ ಮಾಡಿ ತಂದ ಹಣ್ಣುಗಳನ್ನ ವಾರಗಳ ಕಾಲ ಹಾಳಾಗದಂತೆ ಇಟ್ಟುಕೊಳ್ಳೋದೇ ಒಂದು ದೊಡ್ಡ ಸವಾಲಾಗಿದೆ. ಎಲ್ಲಾ ಹಣ್ಣುಗಳು ಒಮ್ಮೆಲೆ ಹಣ್ಣಾಗಿಬಿಡೋದ್ರಿಂದ ಎಲ್ಲವನ್ನ ಒಟ್ಟಿಗೆ ಸೇವಿಸೋಕೂ ಆಗದೇ ಇತ್ತ ಬಿಸಾಡಲೂ ಆಗದೇ ಕಷ್ಟ ಎನಿಸಿಬಿಡುತ್ತದೆ. ಆದರೆ ಈ ಕಷ್ಟದ ಕೆಲಸಕ್ಕೆ ದಕ್ಷಿಣ ಕೊರಿಯಾವು ಹೊಸ ಐಡಿಯಾವೊಂದನ್ನ ಕಂಡು ಹಿಡಿದಿದೆ.

ದಕ್ಷಿಣ ಕೊರಿಯಾದಲ್ಲಿ ಮಾತ್ರ ಬಾಳೆಹಣ್ಣುಗಳನ್ನ ಪ್ಯಾಕ್​ ಮಾಡುವ ಶೈಲಿಯೇ ಬೇರೆ. ಇಲ್ಲಿ ನಿಮಗೆ ಒಂದು ಬಾಕ್ಸ್ ಬಾಳೆಹಣ್ಣಿನಲ್ಲಿ ಪೂರ್ತಿ ಮಾಗಿದ, ಅರ್ಧ ಮಾಗಿದ, ಇನ್ನೂ ಕಾಯಿಯಾಗೇ ಇರುವ ಹೀಗೆ ವಿವಿಧ ಹಂತದಲ್ಲಿರುವ ಬಾಳೆಹಣ್ಣುಗಳನ್ನ ನೀಡಲಾಗುತ್ತೆ.

ದಕ್ಷಿಣ ಕೊರಿಯಾದಲ್ಲಿ ಬಾಳೆಹಣ್ಣಿನ ಪ್ಯಾಕೇಜಿಂಗ್​ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ದಕ್ಷಿಣ ಕೊರಿಯಾದ ಜನತೆಯ ಈ ಐಡಿಯಾಗೆ ನೆಟ್ಟಿಗರು ತಲೆಬಾಗಿದ್ದು ಈ ರೀತಿ ಮಾಡಿದ್ರೆ ಬಾಳೆಹಣ್ಣು ವ್ಯರ್ಥವಾಗೋದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

— All Things Interesting (@mrstrangefact) July 19, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...