alex Certify ಇವುಗಳಿಂದ ದೂರ ಇರಲು ಮಹಿಳೆಯರು ಸೇವಿಸಿ ದಿನಕ್ಕೊಂದು ʼಬಾಳೆ ಹಣ್ಣುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವುಗಳಿಂದ ದೂರ ಇರಲು ಮಹಿಳೆಯರು ಸೇವಿಸಿ ದಿನಕ್ಕೊಂದು ʼಬಾಳೆ ಹಣ್ಣುʼ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ವಿಚಾರ. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರು ಪ್ರತಿ ದಿನ ಬಾಳೆ ಹಣ್ಣಿನ ಸೇವನೆ ಮಾಡಬೇಕು. ಒತ್ತಡ ಮತ್ತು ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ಮಹಿಳೆಯರು ಅವಶ್ಯಕವಾಗಿ ಬಾಳೆ ಹಣ್ಣಿನ ಸೇವನೆ ಮಾಡಬೇಕು. ಮೂಳೆಗಳು ಗಟ್ಟಿಯಾಗುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಬಾಳೆಹಣ್ಣು ಪೋಷಕಾಂಶಗಳ ಖಜಾನೆಯಾಗಿದೆ. ಇದ್ರಲ್ಲಿ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಎ, ಬಿ, ಬಿ 6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶವಿದೆ.

ಗರ್ಭಿಣಿಯರು ಪ್ರತಿದಿನ ಒಂದು ಬಾಳೆಹಣ್ಣನ್ನು ಸೇವನೆ ಮಾಡಬೇಕು. ಇದು  ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಗರ್ಭಿಣಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರಿಗೂ ಪ್ರಯೋಜನಕಾರಿ. ಭ್ರೂಣದ ಉತ್ತಮ ಬೆಳವಣಿಗೆಗೆ ಬಾಳೆಹಣ್ಣು ಅತ್ಯಗತ್ಯ.

ಬಾಳೆಹಣ್ಣಿನ ಸೇವನೆಯು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಕಡಿಮೆ ಮಾಡುವ ಪ್ರೋಟೀನ್ ಬಾಳೆಹಣ್ಣಿನಲ್ಲಿ ಕಂಡುಬರುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ 6 ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸರಿದೂಗಿಸುತ್ತದೆ.

ಬಾಳೆಹಣ್ಣು, ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಮೊದಲು ಬಾಳೆ ಹಣ್ಣಿನ ಸೇವನೆ ಮಾಡಬೇಕು. ಇದು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡುತ್ತದೆ.

ಬಾಳೆಹಣ್ಣನ್ನು ಒಂದು ಸಂಪೂರ್ಣ ಆಹಾರ ಎನ್ನಬಹುದು. ಇದು ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಹೊಂದಿದೆ.  ಮಹಿಳೆಯರು ಪ್ರತಿದಿನ ಬೆಳಿಗ್ಗೆ ಬಾಳೆಹಣ್ಣನ್ನು ತಿಂದರೆ ಇಡೀ ದಿನದ ಶಕ್ತಿ ಸಿಗುತ್ತದೆ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...