alex Certify ಸೀರೆಯಿಂದಲೇ ನೂರಾರು ಪ್ರಯಾಣಿಕರ ಜೀವ ಉಳಿಸಿದ ನಾರಿ: ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯಿಂದಲೇ ನೂರಾರು ಪ್ರಯಾಣಿಕರ ಜೀವ ಉಳಿಸಿದ ನಾರಿ: ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿಸಿದ ಮಹಿಳೆ

ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಎರಡು ಕೋಲುಗಳು ಮತ್ತು ಸೀರೆಯಿಂದ ದೊಡ್ಡ ರೈಲು ಅಪಘಾತವನ್ನು ತಡೆದ ಫೋಟೋ ವೈರಲ್ ಆಗಿದೆ.

ಸಮಯಪ್ರಜ್ಞೆ ಮೆರೆದ ಮಹಿಳೆ ಹಳಿ ಮೇಲೆ ಎರಡು ಕೋಲುಗಳಿಗೆ ಕೆಂಪು ಸೀರೆ ಕಟ್ಟಿ ಸಂಭವಿಸಬಹುದಾಗಿದ್ದ ರೈಲು ಅಪಘಾತ ತಪ್ಪಿಸಿದ್ದಾರೆ. ಹೊಲಕ್ಕೆ ಹೋಗುತ್ತಿದ್ದ ಮಹಿಳೆ ಓಮಾವತಿ ಅವರು ಹಳಿಗಳನ್ನು ದಾಟುತ್ತಿದ್ದಾಗ ಹಳಿಗಳ ನಡುವೆ ಅಂತರ ಉಂಟಾಗಿರುವುದನ್ನು ಗಮನಿಸಿದ್ದಾರೆ. ಈ ಮಾರ್ಗದಲ್ಲಿ ಕೆಲವೇ ನಿಮಿಷಗಳಲ್ಲಿ ರೈಲು ಬರುತ್ತದೆ ಎಂಬುದನ್ನು ತಿಳಿದ ಓಮಾವತಿ ಅಲ್ಲೇ ಇದ್ದ ಎರಡು ಕೋಲುಗಳಿಗೆ ಸೀರೆ ಕಟ್ಟಿ ಹಳಿಗೆ ಅಡ್ಡವಾಗಿ ಇಟ್ಟಿದ್ದಾರೆ.

ಇದೇ ಮಾರ್ಗವಾಗಿ ಬಂದ ರೈಲು ಚಾಲಕ ಕೆಂಪು ಸೀರೆ ಗಮನಿಸಿ ರೈಲು ನಿಲ್ಲಿಸಿದ್ದಾರೆ. ನಂತರ ಅಂತರದಲ್ಲಿದ್ದ ಟ್ರ್ಯಾಕ್ ಸರಿಪಡಿಸಲು ಅಧಿಕಾರಿಗಳು 30 ನಿಮಿಷ ತೆಗೆದುಕೊಂಡಿದ್ದಾರೆ. ನಂತರ ರೈಲು ಸೇವೆ ಪುನರಾರಂಭಿಸಲಾಗಿದೆ ಎಂದು ಯುಪಿ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ಪೋಸ್ಟ್‌ ಮಾಡಿದ್ದಾರೆ.

ವೈರಲ್ ಆಗಿರುವ ಟ್ವೀಟ್ 11,000 ಕ್ಕೂ ಹೆಚ್ಚು “ರೀಟ್ವೀಟ್‌ಗಳು” ಮತ್ತು ಸುಮಾರು 58,000 ಲೈಕ್‌ ಗಳನ್ನು ಪಡೆದುಕೊಂಡಿದೆ, ಮಹಿಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಳಕೆದಾರರು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...