alex Certify ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡದಿರಲು ಹಾಕಿ ಈ ಪ್ರಾಣಿಗಳ ‘ಫೋಟೋ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡದಿರಲು ಹಾಕಿ ಈ ಪ್ರಾಣಿಗಳ ‘ಫೋಟೋ’

ಸನಾತನ ಧರ್ಮದಲ್ಲಿ ದೇವಾನುದೇವತೆಗಳನ್ನು ಮಾತ್ರವಲ್ಲ ಅವರ ವಾಹನಗಳನ್ನು ಕೂಡ ಪೂಜೆ ಮಾಡಲಾಗುತ್ತದೆ. ಮನೆ, ಅಂಗಡಿ ಅಥವಾ ಕಾರ್ಯಸ್ಥಳಗಳಲ್ಲಿ ಅವುಗಳ ಫೋಟೋ ಹಾಕುವುದರಿಂದ ಸಮೃದ್ಧಿ ಹಾಗೂ ಸುಖ ಸದಾ ನೆಲೆಸಿರುತ್ತದೆ.

ಗೋವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಮನೆ ಅಥವಾ ಕಾರ್ಯಸ್ಥಳದ ದೇವರ ಮನೆಯಲ್ಲಿ ಗೋ ಮಾತೆಯ ಫೋಟೋ ಹಾಕಿ ಪೂಜೆ ಮಾಡುವುದರಿಂದ ಅದೃಷ್ಟ ಬದಲಾಗಲಿದೆ. ಮನೆಯ ಈಶಾನ್ಯ ಭಾಗದಲ್ಲಿ ಕೂಡ ಗೋವಿನ ಚಿತ್ರವನ್ನು ಹಾಕಬಹುದು.

ಸನಾತನ ಧರ್ಮದಲ್ಲಿ ಆಮೆಗೆ ಕೂರ್ಮ ಎಂದು ಕರೆಯಲಾಗುತ್ತದೆ. ಯಾರ ಮನೆಯಲ್ಲಿ ಕೂರ್ಮದ ಪ್ರತಿಮೆ ಇರುತ್ತದೆಯೋ ಆ ಮನೆಯಲ್ಲಿ ಅಕಾಲಿಕ ಮೃತ್ಯುವಾಗುವುದಿಲ್ಲ. ಮನೆಯಲ್ಲಿ ಸದಾ ಸುಖ, ಸಮೃದ್ಧಿ ನೆಲೆಸಿರುತ್ತದೆ.

ಸನಾತನ ಧರ್ಮದಲ್ಲಿ ನವಿಲಿಗೆ ಪವಿತ್ರ ಸ್ಥಾನವಿದೆ. ಅನೇಕ ದೇವರಿಗೆ ನವಿಲೆಂದ್ರೆ ಪ್ರೀತಿ. ಮನೆ ಅಥವಾ ಕಚೇರಿಯಲ್ಲಿ ನವಿಲಿನ ಫೋಟೋ ಹಾಕುವುದರಿಂದ ಎಂದೂ ಹಣದ ಕೊರತೆಯಾಗುವುದಿಲ್ಲ.

ಹಿಂದೂ ಧರ್ಮದಲ್ಲಿ ಆನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮಲಗುವ ಕೋಣೆ ಅಥವಾ ಕೆಲಸದ ಜಾಗದಲ್ಲಿ ಬಿಳಿ ಆನೆ ಫೋಟೋ ಇಡುವುದು ಬಹಳ ಉತ್ತಮ.

ದೇವರ ಮನೆ ಅಥವಾ ಹಾಲ್ ನಲ್ಲಿ ಮೀನಿನ ಫೋಟೋ ಇಡುವುದು ಶುಭ. ಮೀನನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ.

ಎಲ್ಲರು ಓಡಾಡುವ, ಎಲ್ಲರ ದೃಷ್ಟಿ ಬೀಳುವ ಜಾಗದಲ್ಲಿ ನಾಯಿ ಫೋಟೋವನ್ನು ಹಾಕಿ.

ಕೋತಿ ಹನುಮಂತನ ಪ್ರತೀಕ. ಮನೆಯ ನೈರುತ್ಯ ದಿಕ್ಕಿನಲ್ಲಿ ಕೋತಿಯ ಫೋಟೋ ಹಾಕುವುದರಿಂದ ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...