alex Certify ಶಾಲಾ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ‘ನಾನು ಬಾಬ್ರಿ’ ಬ್ಯಾಡ್ಜ್​ ಅಂಟಿಸಿದ ಪಿಎಫ್​ಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ‘ನಾನು ಬಾಬ್ರಿ’ ಬ್ಯಾಡ್ಜ್​ ಅಂಟಿಸಿದ ಪಿಎಫ್​ಐ

ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ‘ನಾನು ಬಾಬ್ರಿ’ ಎಂಬ ಬ್ಯಾಡ್ಜ್​ನ್ನು ವಿತರಿಸಿದ ಆರೋಪದ ಅಡಿಯಲ್ಲಿ ಕೇರಳ ಪೊಲೀಸರು ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​​​ 341, 153 ಎ ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿಕೆ ಕೃಷ್ಣದಾಸ್​​ ಪತ್ತನಂತಿಟ್ಟ ಜಿಲ್ಲೆಯ ಸೇಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆದ ಘಟನೆ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಎನ್​ಸಿಪಿಸಿಆರ್​​ಗೆ ಪತ್ರ ಬರೆದಿರುವ ಬಿಜೆಪಿ, ಮುನೀರ್​ ಇಬ್ನು ನಜೀರ್​ ನೇತೃತ್ವದಲ್ಲಿ ಪಿಎಫ್​ಐ ಸದಸ್ಯರು ಶಾಲೆ ಕಡೆಗೆ ತೆರಳುತ್ತಿದ್ದ ಹಿಂದೂ ಹಾಗೂ ಕ್ರಿಶ್ಚಿಯನ್​ ಸಮುದಾಯದ 7 ವರ್ಷದೊಳಗಿನ ಮಕ್ಕಳನ್ನೇ ಕರೆದು ಅವರಿಗೆ ನಾನು ಬಾಬ್ರಿ ಬ್ಯಾಡ್ಜ್​ನ್ನು ಧರಿಸುವಂತೆ ಒತ್ತಡ ಹೇರಿದ್ದಾರೆ. ಮಕ್ಕಳು ಬ್ಯಾಡ್ಜ್​ ಧರಿಸಲು ನಿರಾಕರಿಸಿದರೂ ಸಹ ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಬ್ಯಾಡ್ಜ್​ ಧರಿಸುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ರೀತಿ ಮಾಡುವ ಮೂಲಕ ಪಿಎಫ್​ಐ ಸಂಘಟನೆ ಹಾಗೂ ಅದರ ಕಾರ್ಯಕರ್ತರು ಶಾಲೆಗೆ ತೆರಳುತ್ತಿದ್ದ ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ. ಮಕ್ಕಳ ಮೂಲಭೂತ ಹಕ್ಕುಗಳಿಗೆ ಭಂಗ ತಂದ ಪಿಎಫ್​​ಐ ವಿರುದ್ಧ ಎನ್​ಸಿಪಿಸಿಆರ್​​ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್​, ಕೇರಳವನ್ನು ಮತ್ತೊಂದು ಸಿರಿಯಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಘಟನೆ ಸಂಬಂಧ ಸಿಎಂ ಪಿಣರಾಯಿ ವಿಜಯನ್​ ಮೌನ ಕೂಡ ಸೂಕ್ತವಲ್ಲ ಎಂದು ಹೇಳಿದ್ದಾರೆ.

— K Surendran (@surendranbjp) December 6, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...