ಕೆಲವು ಬೇಜವಾಬ್ದಾರಿ ಇರುವ ಜನರೇ ಹಾಗೆ ಎಲ್ಲಿ ಏನು ಮಾಡಬಾರದೋ ಅಂಥ ಕೆಲಸವನ್ನೇ ಮಾಡುತ್ತಾರೆ. ಆದರೆ ಇಂಥವರು ಮಾಡುವ ಕೆಲಸವನ್ನು ಸಹಿಸದೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಎದುರಿಸಿರುವ ಘಟನೆಯು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ಅರೇ ಇದೇನು ಹೇಳುತ್ತಿದ್ದಾರೆ ಇವರು ಅಂತಾ ಅನ್ಕೋಬೇಡಿ, ಅದೇನೆಂದು ಈ ಸ್ಟೋರಿ ಓದಿ. ಹೌದು, ಪೆಟ್ರೋಲ್ ಪಂಪ್ ಒಂದರಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸಿಗರೇಟ್ ಸೇದುವುದನ್ನು ಗಮನಿಸಿದ ಪೆಟ್ರೋಲ್ ಪಂಪ್ ಮಾಲೀಕ, ಸಿಗರೇಟ್ ಸೇದಬೇಡಿ ಎಂದು ಕೇಳಿಕೊಂಡಿದ್ದಾರೆ.
ಸ್ಕ್ಯಾನಿಂಗ್ ನಲ್ಲಿ ಕಳ್ಳನ ಅಸಲಿಯತ್ತು ಬಯಲು
ಆದರೆ ಇವರ ಮಾತನ್ನು ಕಿವಿಗೆ ಹಾಕಿಕೊಳ್ಳದ ಆ ಭೂಪ ತನ್ನ ಪಾಡಿಗೆ ಸಿಗರೇಟು ಸೇದಿದ್ದಾನೆ. ಇದರಿಂದ ವಿಚಲಿತರಾದ ಮಾಲೀಕರು, ಕೂಡಲೇ ಧೂಮಪಾನ ಮಾಡುತ್ತಿರುವ ವ್ಯಕ್ತಿಯ ಬಳಿ ಬಂದು ಸುರಕ್ಷತಾ ಅಗ್ನಿಶಾಮಕವನ್ನು ತೆರೆಯುವ ಮುಖಾಂತರ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ಸುತ್ತಲೂ ಮೋಡ ತುಂಬಿಕೊಂಡಂತೆ ಭಾಸವಾಗಿದೆ. ಸದ್ಯ ಈ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪೆಟ್ರೋಲ್ ಪಂಪ್ ಮಾಲೀಕರ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.