alex Certify 2022 ರಲ್ಲಿ ಈ ರಾಶಿಯವರಿಗಿದೆ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022 ರಲ್ಲಿ ಈ ರಾಶಿಯವರಿಗಿದೆ ಸಂಕಷ್ಟ

ಹೊಸ ವರ್ಷ ಇನ್ನೇನು ಬರಲಿದೆ. ಎಲ್ಲರೂ ಹೊಸ ವರ್ಷದಲ್ಲಿ ಏನೇನು ಬದಲಾವಣೆ ಆಗಬೇಕು, ಯಾವ ಹೊಸ ಕೆಲಸವನ್ನು ಮಾಡಬೇಕು ಎಂದು ಪ್ಲಾನ್ ಮಾಡುತ್ತಿರುತ್ತಾರೆ.

2022ರಲ್ಲಿ ಮನುಷ್ಯರ ಹೊರತಾಗಿ ಗ್ರಹಗಳ ಚಲನೆಯಲ್ಲಿ ಕೂಡ ಪ್ರಮುಖ ಬದಲಾವಣೆ ಕಾಣಿಸಲಿದೆ.

ಅದರಲ್ಲೂ ಜೀವನದಲ್ಲಿ ಸಮಸ್ಯೆ ಉಂಟುಮಾಡುವ ಗ್ರಹಗಳ ಪೈಕಿ ಮುಂಚೂಣಿಯಲ್ಲಿರುವ ಶನಿ ಮತ್ತು ರಾಹುವಿನ ರಾಶಿಚಕ್ರದಲ್ಲಿ ಬದಲಾವಣೆಯಾಗುತ್ತಿದೆ. ಶನಿಗ್ರಹವು ಎರಡೂವರೆ ವರ್ಷದಲ್ಲಿ ಮತ್ತು ರಾಹು ಒಂದೂವರೆ ವರ್ಷದಲ್ಲಿ ಸ್ಥಾನ ಬದಲಾಯಿಸುತ್ತಿವೆ. ಇದರಿಂದ ಈ 6 ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಮೇಷ: ಏಪ್ರಿಲ್ ತಿಂಗಳಲ್ಲಿ ರಾಹು ಮೇಷ ರಾಶಿಗೆ ಕಾಲಿಡುತ್ತಾನೆ. ಇದರಿಂದ ಕುಟುಂಬದಲ್ಲಿ, ಸಂಬಂಧದಲ್ಲಿ ಮತ್ತು ವ್ಯಾಪಾರ ಜೀವನದಲ್ಲಿ ತೊಂದರೆಯಾಗುತ್ತದೆ. ಧನಹಾನಿಯೂ ಆಗುತ್ತದೆ. ಈ ರಾಶಿಯವರು ಜನರೊಂದಿಗೆ ಕಹಿಯಾಗಿ ಮಾತನಾಡದೇ ಇರಲು ಪ್ರಯತ್ನಿಸಬೇಕು.

ವೃಷಭ: ವೃಷಭ ರಾಶಿಗೆ ರಾಹುವಿನ ಸಂಚಾರವಾಗುವುದರಿಂದ ಈ ರಾಶಿಯವರಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲವುಂಟಾಗುತ್ತದೆ ಮತ್ತು ಯಾವಾಗಲೂ ಕಲ್ಪನೆಯಲ್ಲೇ ಕಳೆದು ಹೋಗುತ್ತಾರೆ. ಖರ್ಚು ಕೂಡ ಹೆಚ್ಚಾಗುತ್ತದೆ.

ಕರ್ಕ: ಕರ್ಕ ರಾಶಿಯವರಿಗೆ ಏಪ್ರಿಲ್ ನಂತರ ಭವಿಷ್ಯದಲ್ಲಿ ಕಷ್ಟಗಳು ಎದುರಾಗುತ್ತದೆ. ಹೊಸ ನೌಕರಿಯ ಸೌಲಭ್ಯ ಕೂಡ ಸಿಗುತ್ತದೆ ಆದರೆ ಹೊಸ ನೌಕರಿ ಸಿಗುವ ಮೊದಲೇ ಹಳೆಯ ನೌಕರಿಯನ್ನು ಬಿಡಬಾರದು, ಅದರಿಂದ ಮುಂದೆ ತುಂಬ ತೊಂದರೆಯಾಗುತ್ತದೆ.

ಕನ್ಯಾ: ಕನ್ಯಾ ರಾಶಿಯವರು ತಮ್ಮ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು. ಹಿರಿಯರೊಂದಿಗೆ ಕಲಹ ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಪಘಾತ ಅಥವಾ ಇನ್ಯಾವುದಾದರೂ ಕಾರಣದಿಂದ ಗಾಯವಾಗುವ ಸಾಧ್ಯತೆ ಇದೆ.

ವೃಶ್ಚಿಕ: 2022 ರಲ್ಲಿ ವೃಶ್ಚಿಕ ರಾಶಿಯವರಿಗೆ ಸಂಸಾರದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಂಗಾತಿಯೊಂದಿಗೂ ಕಲಹ ಉಂಟಾಗಬಹುದು. ಇವರಿಗೆ ಗೌರವಕ್ಕೂ ಧಕ್ಕೆ ಬರಬಹುದು ಹಾಗಾಗಿ ಸರಿಯಾಗಿ ವಿಚಾರಮಾಡಿ ಬುದ್ಧಿವಂತೆಯಿಂದ ವರ್ತಿಸಬೇಕು.

ಧನು: ಧನು ರಾಶಿಯವರು 2022 ರಲ್ಲಿ ಕಾನೂನು ತೊಡಕಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮಪಟ್ಟರೆ ಮಾತ್ರ ಒಳ್ಳೆಯ ಫಲ ಸಿಗಲು ಸಾಧ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...