alex Certify ಚಳಿಯನ್ನು ಶಪಿಸುತ್ತಿದ್ದೀರಾ ? ಈ ವಿಡಿಯೋ ನೋಡಿದರೆ ಖಂಡಿತ ಹಾಗೆ ಮಾಡಲಾರಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಯನ್ನು ಶಪಿಸುತ್ತಿದ್ದೀರಾ ? ಈ ವಿಡಿಯೋ ನೋಡಿದರೆ ಖಂಡಿತ ಹಾಗೆ ಮಾಡಲಾರಿರಿ

ಚಳಿಗಾಲದಲ್ಲಿನ ಚಳಿಗೆ ಶಪಿಸುವವರೇ ಹೆಚ್ಚು ಮಂದಿ. ಆದರೆ ಚಳಿ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಈ ವಿಡಿಯೋವನ್ನು ಒಮ್ಮೆ ನೋಡಿಬಿಡಿ. ಆಗ ನೀವು ಅನುಭವಿಸುತ್ತಿರುವ ಚಳಿಯ ಬಗ್ಗೆ ಬೈದುಕೊಳ್ಳುವುದೇ ಇಲ್ಲ.
ಈ ವಿಡಿಯೋ ಸಿಯಾಟಲ್‌ನದ್ದು. ವರ್ಷಪೂರ್ತಿ ಮಳೆಯಿಂದ ಆವೃತವಾಗಿರುವ ನಗರವು ದಶಕದಲ್ಲೇ ಅತ್ಯಂತ ಭೀಕರವಾದ ಶೀತಲೀಕರಣದ ಮಳೆಗೆ ಸಿಲುಕಿದೆ.

ಅದರ ವಿಡಿಯೋ ವೈರಲ್‌ ಆಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಹಿಮಾವೃತವಾಗಿರುವುದನ್ನು ಕಾಣಬಹುದು. ಕೈಕಾಲುಗಳೆಲ್ಲವೂ ಹಿಮದಿಂದ ಕೂಡಿದೆ.

ಜನರ ಪರಿಸ್ಥಿತಿ ಅಧೋಗತಿಯದ್ದಾಗಿದೆ. ಇನ್ನು ವಾಹನಗಳ ಪಾಡಂತೂ ಕೇಳುವುದೇ ಬೇಡ. ಅವು ರಸ್ತೆಗೆ ಇಳಿದವು ಎಂದರೆ ಜನರು ಸುರಕ್ಷಿತವಾಗಿ ವಾಪಸ್‌ ಬರುವುದು ಕಷ್ಟ ಎನಿಸುವಂತಿದೆ. ಈ ವಿಡಿಯೋ ನೋಡಿ ಜನರು ದಂಗಾಗಿದ್ದಾರೆ. ಎಷ್ಟು ಭಯಾನಕ ಎಂದು ಕಮೆಂಟ್‌ ಮೂಲಕ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...