alex Certify ‘ಅಂಚೆ ಇಲಾಖೆ’ಯ ನಿವೃತ್ತ ಪಿಂಚಣಿದಾರರಿಗಾಗಿ ಡಿ.18 ರಂದು ಪಿಂಚಣಿ ಅದಾಲತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂಚೆ ಇಲಾಖೆ’ಯ ನಿವೃತ್ತ ಪಿಂಚಣಿದಾರರಿಗಾಗಿ ಡಿ.18 ರಂದು ಪಿಂಚಣಿ ಅದಾಲತ್

ಬಳ್ಳಾರಿ : ಅಂಚೆ ಇಲಾಖೆಯಿಂದ ನಿವೃತ್ತರಾದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಡಿ.18ರಂದು ಸಂಜೆ 4ಕ್ಕೆ ಬಳ್ಳಾರಿ ವಿಭಾಗ ಅಂಚೆ ಕಚೇರಿಯಲ್ಲಿ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ.

ಪಿಂಚಣಿದಾರರು ತಮ್ಮ ಕುಂದು-ಕೊರತೆಗಳಿದ್ದರೆ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ, ಬಳ್ಳಾರಿ, ಅವರಿಗೆ ಡಿ.18 ಮುಂಚಿತವಾಗಿ ತಲಪುವಂತೆ ಪತ್ರ ಮುಖೇನ ಅಥವಾ doballari.ka@indiapost.gov.in ಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಬಹುದು ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...