alex Certify ಹ್ಯಾಕರ್ಸ್​ಗಳು ನಿಮ್ಮ ​’ಫೋನ್’ನ್ನು ಯಾವೆಲ್ಲ ರೀತಿಯಲ್ಲಿ ಟಾರ್ಗೆಟ್​ ಮಾಡುತ್ತಾರೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಕರ್ಸ್​ಗಳು ನಿಮ್ಮ ​’ಫೋನ್’ನ್ನು ಯಾವೆಲ್ಲ ರೀತಿಯಲ್ಲಿ ಟಾರ್ಗೆಟ್​ ಮಾಡುತ್ತಾರೆ ಗೊತ್ತಾ….?

ಪೆಗಾಸಸ್​ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಪೆಗಾಸಸ್​​ನ ಸಹಾಯದಿಂದ ಅನೇಕರ ಮೇಲೆ ನಿಗಾ ಇಡಲಾಗ್ತಿದೆ. ಪೆಗಾಸಸ್​​ ಅತ್ಯಾಧುನಿಕ ಹಾಗೂ ಪವರ್​ಫುಲ್​ ಸಾಫ್ಟ್​ವೇರ್​ ಆಗಿದೆ.

Hacker

ರಿಸಚರ್ಸ್​ ನೀಡಿರುವ ಮಾಹಿತಿಯ ಪ್ರಕಾರ ಸ್ಪೈ ಸಾಫ್ಟ್​ವೇರ್​​​ನಿಂದ ನಿಮ್ಮ ಮೊಬೈಲ್​​ ಫೋನ್​​ನ್ನು ಬಹಳ ಸುಲಭವಾಗಿ ಆಕ್ಸೆಸ್​​ ಮಾಡಬಹುದಾಗಿದೆ. ಇದರ ಸುಳಿವು ಕೂಡ ನಿಮ್ಮ ಹೋಂ ಸ್ಕ್ರೀನ್​​ನಲ್ಲಿ ಕಾಣೋದು ಇಲ್ಲ. ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಿಮ್ಮ ಮೊಬೈಲ್​ ಫೋನ್​ನ್ನು ಟಾರ್ಗೆಟ್​ ಮಾಡಲಾಗುತ್ತೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

Hacker

ಮಿಸ್ಡ್​ ಕಾಲ್​ ಮೂಲಕ :

ಮಿಸ್ಡ್​ ಕಾಲ್​ ಮೂಲಕ ಪೆಗಾಸಸ್​​ ನಿಮ್ಮ ಮೊಬೈಲ್​ ಫೋನ್​ನ್ನು ಟಾರ್ಗೆಟ್​ ಮಾಡುತ್ತದೆ. 2019ರಲ್ಲಿ ಫೇಸ್​ಬುಕ್​​ ಮಾಲೀಕತ್ವದ ವಾಟ್ಸಾಪ್​ನಲ್ಲಿ ಒಂದು ವಲ್ನರೇಬಿಲಿಟಿ ಕಾಣಿಸಿಕೊಂಡಿತ್ತು. ಇದರ ಸಹಾಯದಿಂದ ಸಾಫ್ಟ್​ವೇರ್​​​ ಆಂಡ್ರಾಯ್ಡ್​ ಅಥವಾ ಐಓಎಸ್​​ ಮೊಬೈಲ್​​ಗಳಿಗೆ ಕೇವಲ ಒಂದು ಕಾಲ್​ ಮಾಡುವ ಮೂಲಕ ಟಾರ್ಗೆಟ್​ ಮಾಡಲಾಗುತ್ತಿತ್ತು.

ನಕಲಿ ಅಪ್ಲಿಕೇಶನ್​ಗಳು :

ಸೈಬರ್​ ಕ್ರಿಮಿನಲ್​ ಹಾಗೂ ಹ್ಯಾಕರ್ಸ್​ಗಳಿಗೆ ಇದೊಂದು ಸಾಮಾನ್ಯವಾದ ಮಾರ್ಗವಾಗಿದೆ. ಇದರ ಸಹಾಯದಿಂದ ನಿಮ್ಮ ಮೊಬೈಲ್​​ ಫೋನ್​ನ್ನು ಅವರು ಬಹಳ ಸುಲಭವಾಗಿ ಟಾರ್ಗೆಟ್​ ಮಾಡುತ್ತಾರೆ. ಬಳಕೆದಾರರಿಗೆ ಮೈಲೇಶಿಯಸ್​ ಆ್ಯಪ್​ ಅಥವಾ ಇನ್ಯಾವುದೋ ಮಾಲ್​ವೇರ್​​ನ ಜೊತೆಯಲ್ಲಿ ಡೌನ್​​ಲೋಡ್​ ಮಾಡಿಸಲಾಗುತ್ತದೆ. ಇಂಥಹ ಅಪ್ಲಿಕೇಶನ್​ಗಳು ಥರ್ಡ್ ಪಾರ್ಟಿ ಆ್ಯಪ್​ ಸೆಂಟರ್​ ಹಾಗೂ ವೆಬ್​ಸೈಟ್​ಗಳಲ್ಲಿ ಕಂಡುಬರುತ್ತದೆ.

Hacker

ವಾಟ್ಸಾಪ್​​​, ಇಮೇಲ್​ಗಳು ಹಾಗೂ ಎಸ್​ಎಂಎಸ್​ :

ವಾಟ್ಸಾಪ್​, ಇಮೇಲ್ಸ್ ಹಾಗೂ ಎಸ್​ಎಂಎಸ್​ನ ಸಹಾಯದಿಂದ ಹ್ಯಾಕರ್​ಗಳು ಲಿಂಕ್​ನ್ನು ಕಳುಹಿಸುತ್ತಾರೆ. ಮೊಬೈಲ್​ ಫೋನ್​ ಮಾಲೀಕರು ಈ ಲಿಂಕ್​​ ಮೇಲೆ ಕ್ಲಿಕ್​ ಮಾಡುತ್ತಿದ್ದಂತೆಯೇ ವೈರಸ್​ ಇಲ್ಲವೇ ಸಾಫ್ಟ್​ವೇರ್​​ಗಳು ತನ್ನಿಂದ ತಾನೇ ಇನ್​ಸ್ಟಾಲ್​ ಆಗಿಬಿಡುತ್ತದೆ. ಇದರಿಂದ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನ ಕದಿಯೋದು ಹ್ಯಾಕರ್ಸ್​ಗೆ ಬಹಳ ಸುಲಭವಾಗಿ ಬಿಡುತ್ತದೆ.

Hacker

ಸಿಮ್​ ಕಾರ್ಡ್​ ಸ್ವೈಪ್​ :

ಸಿಮ್​ ಕಾರ್ಡ್​ ಸ್ವೈಪ್​​ ಮಾರ್ಗವನ್ನ ಹ್ಯಾಕರ್ಸ್​ಳು ನಿಮ್ಮ ವೈಯಕ್ತಿಕ ಮಾಹಿತಿಯನ್ನ ಕಲೆಹಾಕುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ತಾರೆ. ಇದಾದ ಬಳಿಕ ಹ್ಯಾಕರ್ಸ್​ ನಿಮ್ಮ ಟೆಲಿಫಾರಂ ಆಪರೇಟರ್​ನ್ನು ಕ್ಯಾಂಟಾಕ್ಟ್​ ಮಾಡಿ ಸಿಮ್​ ರಿಪ್ಲೇಸ್​ಮೆಂಟ್​​ಗೆ ಬೇಡಿಕೆ ಇಡುತ್ತಾರೆ. ಹೊಸ ಸಿಮ್​ ಬಂದ ಬಳಿಕ ಹಳೆಯ ಸಿಮ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಇದರ ಅರ್ಥ ಹ್ಯಾಕರ್ಸ್ ಬಳಿ ನಿಮ್ಮ ಮೊಬೈಲ್​ ಸಂಖ್ಯೆಯ ಸಂಪೂರ್ಣ ಮಾಹಿತಿ ಸಿಗಲಿದೆ.

Hacker

ಬ್ಲೂಟೂಥ್​ ಹ್ಯಾಕಿಂಗ್​ :

ಇದರ ಸಹಾಯದಿಂದ ಹ್ಯಾಕರ್ಸ್​ ತಮ್ಮ ಸಮೀಪವಿರುವ ಸಾಧನವನ್ನ ಬ್ಲೂಟುಥ್​​ನ ಸಹಾಯದಿಂದ ಹ್ಯಾಕ್​ ಮಾಡುತ್ತಾರೆ. ಇದಕ್ಕಾಗಿ ಅವರು ವಿಶೇಷವಾದ ಸಾಫ್ಟ್​ವೇರ್​ ಬಳಕೆ ಮಾಡುತ್ತಾರೆ. ಇಂತಹ ಹ್ಯಾಕ್​ಗಳು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತದೆ. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಇರುವ ವೈ ಫೈ ಮೂಲಕವೂ ಟಾರ್ಗೆಟ್​ ಮಾಡಲಾಗುತ್ತದೆ.

Hacker

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...