alex Certify ಈ ನಾಲ್ಕು ರಾಶಿಯವರು ಮುತ್ತನ್ನು ಧರಿಸಿದರೆ ಬಹಳ ಲಾಭವಾಗುತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಾಲ್ಕು ರಾಶಿಯವರು ಮುತ್ತನ್ನು ಧರಿಸಿದರೆ ಬಹಳ ಲಾಭವಾಗುತ್ತೆ

ಆಭರಣ ಪ್ರಿಯರು ವಿವಿಧ ರೀತಿಯ ಆಭರಣಗಳನ್ನು ಧರಿಸುತ್ತಾರೆ. ಮುತ್ತು, ರತ್ನ, ಹವಳ, ವಜ್ರ ಮುಂತಾದ ನವರತ್ನಗಳ ಆಭರಣಗಳು ಎಲ್ಲರಿಗೂ ಶೋಭೆ ನೀಡುತ್ತದೆ. ನವರತ್ನಗಳಲ್ಲಿ ಒಂದಾದ ಮುತ್ತನ್ನು ಚಂದ್ರನ ರತ್ನ ಎಂದು ಹೇಳಲಾಗುತ್ತೆ. ಏಕೆಂದರೆ ಇದು ಚಂದ್ರನಂತೆ ಸುಂದರ ಮತ್ತು ಕೋಮಲವಾಗಿದೆ.

ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತನ್ನು ಅವರವರ ರಾಶಿ, ಗ್ರಹಗಳಿಗೆ ತಕ್ಕಂತೆ ಧರಿಸಬೇಕು. ಕೆಲವರಿಗೆ ಮುತ್ತನ್ನು ಧರಿಸುವುದರಿಂದ ಒಳ್ಳೆಯದಾಗುತ್ತದೆ ಮತ್ತು ಇನ್ನು ಕೆಲವರಿಗೆ ಇದು ಕೆಡುಕನ್ನು ಮಾಡಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತನ್ನು ಮೇಷ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಧರಿಸಬಹುದು. ಈ ರಾಶಿಯವರು ಮುತ್ತನ್ನು ಧರಿಸುವುದರಿಂದ ಅವರ ಮಾನಸಿಕ ಒತ್ತಡಗಳು ದೂರವಾಗುತ್ತದೆ. ಈ ರಾಶಿಯವರು ಮುತ್ತಿನ ಹೊರತಾಗಿ ನೀಲಮಣಿ ಮತ್ತು ಹವಳವನ್ನು ಧರಿಸಬಹುದು. ಬೇರೆ ಯಾವ ರತ್ನವೂ ಈ ರಾಶಿಯವರಿಗೆ ಸೂಕ್ತವಲ್ಲ.

ವೃಷಭ, ಮಿಥುನ, ಕನ್ಯಾ, ಮಕರ, ಕುಂಭ ರಾಶಿಯವರು ಮುತ್ತನ್ನು ಧರಿಸಲೇಬಾರದು. ಇವರ ಹೊರತಾಗಿ ಭಾವುಕ ಸ್ವಭಾವದ ವ್ಯಕ್ತಿಗಳು ಮತ್ತು ಕೋಪಿಷ್ಟರು ಕೂಡ ಮುತ್ತನ್ನು ಧರಿಸಕೂಡದು. ಸಿಂಹ, ತುಲಾ ಮತ್ತು ಧನು ರಾಶಿಯವರು ಜ್ಯೋತಿಷ್ಯರ ಸಲಹೆ ಪಡೆದುಕೊಂಡು ಮುತ್ತನ್ನು ಧರಿಸಬಹುದಾಗಿದೆ.

ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಕಟ್ಟಿ ಧರಿಸುವುದರಿಂದ ಶುಭವಾಗುತ್ತದೆ. ಶುಕ್ಲ ಪಕ್ಷದ ಸೋಮವಾರ ರಾತ್ರಿ ಇದನ್ನು ಕಿರುಬೆರಳಿಗೆ ಧರಿಸಬೇಕು. ಇದರ ಹೊರತಾಗಿ ಹುಣ್ಣಿಮೆಯಂದು ಇದನ್ನು ಧರಿಸಬಹುದು. ಇದನ್ನು ಹಾಕಿಕೊಳ್ಳುವ ಮೊದಲು ಗಂಗಾಜಲದಿಂದ ತೊಳೆದು ಶಿವನಿಗೆ ಅರ್ಪಿಸುವುದು ಶ್ರೇಯಸ್ಕರವಾಗಿದೆ. ಮುತ್ತನ್ನು ಧರಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಇದು ನಿದ್ರೆಯನ್ನು ಮತ್ತು ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...