alex Certify Paytm ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Paytm ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ನವದೆಹಲಿ: ಎಲ್ಲ ಯುಪಿಐ ಪೇಮೆಂಟ್‌ ಅಪ್ಲಿಕೇಷನ್‌ಗಳಿಗೂ ಪೇಟಿಎಂ ಮೂಲಕ ಪಾವತಿ ಮಾಡುವ ಹೊಸ ಫೀಚರ್​ ಇದೀಗ ಜಾರಿಗೆ ತರಲಾಗಿದೆ. ಪೇಟಿಎಂ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವ ಬಳಕೆದಾರರು ಈಗ ಎಲ್ಲ ಯುಪಿಐ ಪಾವತಿ ಅಪ್ಲಿಕೇಷನ್‌ಗಳಾದ್ಯಂತ ಮೊಬೈಲ್ ಸಂಖ್ಯೆಗಳಿಗೆ ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗಿದೆ.

ನಿಮ್ಮ ಬಳಿ ಪೇಟಿಎಂ ಆ್ಯಪ್​ ಇದ್ದರೆ ನೋಂದಾಯಿತ ಯುಪಿಐ ಐಡಿಯೊಂದಿಗೆ ಯಾವುದೇ ಮೊಬೈಲ್ ಸಂಖ್ಯೆಗೆ ಮತ್ತು ಸೇವಾ ಪೂರೈಕೆದಾರರನ್ನು ಲೆಕ್ಕಿಸದೆ ತಕ್ಷಣ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಇದಕ್ಕೆ ಮಾಡಬೇಕಿರುವುದು ಇಷ್ಟು:

– ಪೇಟಿಎಂ ಆ್ಯಪ್​ ‘ಯುಪಿಐ ಹಣ ವರ್ಗಾವಣೆ’ ವಿಭಾಗದಲ್ಲಿ, ‘ಯುಪಿಐ ಅಪ್ಲಿಕೇಷನ್‌’ ಕ್ಲಿಕ್​ ಮಾಡಬೇಕು

– ‘ಯಾವುದೇ ಯುಪಿಐ ಅಪ್ಲಿಕೇಷನ್‌ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ’ ಎಂಬುದರ ಮೇಲೆ ಕ್ಲಿಕ್​ ಮಾಡಿ ಹಣ ಸ್ವೀಕರಿಸುವವರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು

– ಎಷ್ಟು ಹಣವನ್ನು ನೀಡಬೇಕೋ ಆ ಮೊತ್ತವನ್ನು ನಮೂದಿಸಿ ಮತ್ತು ಹಣದ ಶೀಘ್ರ ವರ್ಗಾವಣೆಗಾಗಿ ‘ಈಗ ಪಾವತಿಸಿ’ ಟ್ಯಾಪ್ ಮಾಡಬೇಕು. ಇಷ್ಟಾದರೆ ಹಣ ಸಂದಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...