alex Certify Good News: ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಪೇಟಿಎಂನಿಂದ ‘ಹೆಲ್ತ್ ಲಾಕರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಪೇಟಿಎಂನಿಂದ ‘ಹೆಲ್ತ್ ಲಾಕರ್’

ನವದೆಹಲಿ: ಪೇಟಿಎಂ ಹೊಸದೊಂದು ಫೀಚರ್​ ಆರಂಭಿಸಿದೆ. ಇದರಲ್ಲಿ ಬಳಕೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ. ಇದಕ್ಕಾಗಿ ಪೇಟಿಎಂನಿಂದ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಹೆಲ್ತ್ ಲಾಕರ್ (ABHA health locker) ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಬಳಕೆದಾರರಿಗೆ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಆರೋಗ್ಯ ಸೌಲಭ್ಯಗಳಲ್ಲಿ ನೇರವಾಗಿ ಹಂಚಿಕೊಳ್ಳಲು ಅನುಮತಿಸುತ್ತದೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಭಾಗವಾಗಿರುವ ಪೇಟಿಎಂ ಪ್ರಮಾಣೀಕೃತ ಸಾರ್ವಜನಿಕ ಆರೋಗ್ಯ ದಾಖಲೆ ಅಪ್ಲಿಕೇಶನ್ ಆಗಿದೆ. ಇದರ ಬಳಕೆದಾರರು ಒಮ್ಮೆ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯನ್ನು ರಚಿಸಿದಾಗ Paytm ABHA ಹೆಲ್ತ್ ಲಾಕರ್ ಅನ್ನು ಪ್ರವೇಶಿಸಬಹುದು.

ABHA ಆರೋಗ್ಯ ಸೇವೆಗಳು ಮತ್ತು ವೈಯಕ್ತಿಕ ವೈದ್ಯಕೀಯ ದಾಖಲೆಗಳನ್ನು ಪ್ರವೇಶಿಸಲು ಇದರಿಂದ ಸಹಾಯವಾಗುತ್ತದೆ. ABHA ಅನ್ನು ರಚಿಸಿದ ನಂತರ QR ಕೋಡ್ ಅನ್ನು ರಚಿಸಲಾಗುತ್ತದೆ ಇದು ಬಳಕೆದಾರರಿಗೆ ತುರ್ತು ಸಮಯದಲ್ಲಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಸ್ಕ್ಯಾನ್ ಮಾಡಿ ಹಣ ಪಾವತಿಗೆ ಅನುವು ಮಾಡಿಕೊಡುತ್ತದೆ.

ಇಷ್ಟೇ ಅಲ್ಲದೇ, ಹೆಲ್ತ್ ಲಾಕರ್ ಕ್ಯೂಆರ್ ಕೋಡ್ ಬಳಸಿಕೊಂಡು ಕೆಲವು ಆಸ್ಪತ್ರೆಗಳಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಜೊತೆಗೆ, ಆರೋಗ್ಯ ವಿಮಾ ಪಾಲಿಸಿ, ಡಯಾಗ್ನೋಸ್ಟಿಕ್ ವರದಿಗಳು, ಪ್ರಿಸ್ಕ್ರಿಪ್ಷನ್‌ಗಳು, ಔಷಧಿ ಬಿಲ್‌ಗಳು, ಕೋವಿಡ್​ ಲಸಿಕೆ ಪ್ರಮಾಣಪತ್ರಗಳು, PMJAY ಕಾರ್ಡ್‌ಗಳಂತಹ ದಾಖಲೆಗಳನ್ನು ಅಪ್‌ಲೋಡ್ ಮಾಡಿಟ್ಟುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...