alex Certify ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ‌ʼಪೇಟಿಎಂʼನಿಂದ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ‌ʼಪೇಟಿಎಂʼನಿಂದ ಭರ್ಜರಿ ಗುಡ್‌ ನ್ಯೂಸ್

ಫಿನ್​ಟೆಕ್​ ಉದ್ಯಮಕ್ಕಾಗಿ ಮಾನವ ಸಂಪನ್ಮೂಲಗಳ ಉನ್ನತ ಗುಣಮಟ್ಟವನ್ನು ರಚಿಸುವ ಸಲುವಾಗಿ ಪೇಟಿಎಂ ಸಾಮಾನ್ಯ ತರಬೇತಿ ನಿರ್ದೇಶನಾಲಯ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲ ಸಚಿವಾಲಯದೊಂದಿಗೆ ಮೂರು ವರ್ಷಗಳ ಅವಧಿಯಲ್ಲಿ 6000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಿದೆ.

ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಫಿನ್​ಟೆಕ್​ ಉತ್ಪನ್ನ ಹಾಗೂ ಹಣಕಾಸು ಸೇವೆಗಳ ಮೂಲಭೂತ ಅಂಶಗಳನ್ನು ಕಲಿಸುವ ಗುರಿಯನ್ನು ಈ ಕೋರ್ಸ್​ ಹೊಂದಿದೆ. ಈ ತರಬೇತಿ ಪಡೆಯುವವರು ವೃತ್ತಿಪರ ಕೌಶಲ್ಯ, ಸಂವಹನ, ಮಾರಾಟ ಹಾಗೂ ಕೆಲಸದ ತರಬೇತಿ ಪಡೆಯುತ್ತಾರೆ. ಕೋರ್ಸ್​ ಪೂರ್ಣಗೊಳ್ಳುತ್ತಿದ್ದಂತೆಯೇ ಅರ್ಹ ತರಬೇತಿದಾರರಿಗೆ ಪೇಟಿಎಂ ಉದ್ಯೋಗ ಒದಗಿಸಲಿದೆ.

ಕೋರ್ಸ್ ವಿಚಾರವಾಗಿ ಮಾತನಾಡಿದ ಪೇಟಿಎಂ ಹಿರಿಯ ಉಪಾಧ್ಯಕ್ಷ ನರೇಂದ್ರ ಯಾದವ್​, ಭಾರತದ ಶಕ್ತಿ ಯುವಕರ ಕೈಯಲ್ಲಿದೆ. ಯುವ ಜನಾಂಗ ದೇಶದ ಆರ್ಥಿಕತೆಯ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ದೇಶದಲ್ಲಿ ಅರ್ಹ ಯುವಕರ ವೃತ್ತಿಪರ ತರಬೇತಿಯಲ್ಲಿ ಡಿಜಿಟಿ ಪ್ರಮುಖ ಪಾತ್ರ ವಹಿಸುತ್ತದೆ. ಫಿನ್​ಟೆಕ್​​ ಉದ್ಯಮದಲ್ಲಿ ತರಬೇತಿ ಪಡೆದ ಸಿಬ್ಬಂದಿಯ ಗುಣಮಟ್ಟ ಸುಧಾರಿಸುವಲ್ಲಿ ಡಿಜಿಟಿಯೊಂದಿಗೆ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...