alex Certify ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ದಿನವೇ ತಲೆ ಮೇಲೆ ಕೈಹೊತ್ತು ಕುಳಿತ ಪೇಟಿಎಂ ಹೂಡಿಕೆದಾರರು: ಕೆಲವೇ ಗಂಟೆಯಲ್ಲಿ 35,000 ಕೋಟಿ ರೂ. ನಷ್ಟ

ಗುರುವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರದಲ್ಲಿ, ಐಪಿಒ ಇತಿಹಾಸದಲ್ಲಿ ಅತಿದೊಡ್ಡ  ಪೇಟಿಎಂ ಐಪಿಒ ಲಿಸ್ಟ್ ಆಯ್ತು. ಈ ವೇಳೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಷೇರು ವಿನಿಮಯ ಕೇಂದ್ರದಲ್ಲಿ ಅಳಲು ಪ್ರಾರಂಭಿಸಿದ್ದರು. ಆದ್ರೆ ಪೇಟಿಎಂ ಲಿಸ್ಟ್ ಆದ ಬಳಿಕ ಪೇರುದಾರರ ಕಣ್ಣಲ್ಲಿ ನೀರು ಬಂದಿದೆ. ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಮೊದಲ ದಿನವೇ ಹೂಡಿಕೆದಾರರಿಗೆ ದೊಡ್ಡ ನಿರಾಶೆಯಾಗಿದೆ. ಮೊದಲ ದಿನವೇ 35,000 ಕೋಟಿ ರೂಪಾಯಿ ನಷ್ಟವಾಗಿದೆ.

ಪೇಟಿಎಂ 18,300 ರೂಪಾಯಿ ಕೋಟಿ ರೂಪಾಯಿಗಳ ಐಪಿಒ ಲೀಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 38,000 ಕೋಟಿ ರೂಪಾಯಿ ನಷ್ಟವಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವ ಮುನ್ನ ಪೇಟಿಎಂನ ಮಾರುಕಟ್ಟೆ ಮೌಲ್ಯವು ಐಪಿಒ ಬೆಲೆಯ ಪ್ರಕಾರ 1.39 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಇಂದು ಅದನ್ನು ಪಟ್ಟಿ ಮಾಡಿದಾಗ ಅದರ ಮಾರುಕಟ್ಟೆ ಮೌಲ್ಯವು 101,182 ಕೋಟಿ ರೂಪಾಯಿಗಳಿಗೆ ಇಳಿದಿದೆ. ಅಂದರೆ ನೇರ ಮಾರುಕಟ್ಟೆ ಮೌಲ್ಯದಲ್ಲಿ 35,000 ಕೋಟಿ ರೂಪಾಯಿ ಇಳಿಕೆಯಾಗಿದೆ.

ಇಂದಿನ ವಹಿವಾಟಿನ ಕೊನೆಯಲ್ಲಿ ಪೇಟಿಎಂ ಷೇರುಗಳು ಶೇಕಡಾ 27.40ರಷ್ಟು  ಇಳಿಕೆಯೊಂದಿಗೆ 1560.80 ರೂಪಾಯಿಗೆ ತಲುಪಿವೆ. ಕೆಲ ದಿನಗಳ ಹಿಂದೆ ಐಪಿಒ ಮೂಲಕ ಸಾರ್ವಜನಿಕರಿಗೆ ಷೇರು ಖರೀದಿಸಲು ಪೇಟಿಎಂ ಅವಕಾಶ ನೀಡಿತ್ತು. ಪ್ರತಿ ಷೇರನ್ನು ಆಗ 2150 ರೂಪಾಯಿಗೆ ಮಾರಾಟ ಮಾಡಿತ್ತು. ಆದ್ರೆ ಇಂದು ಆರಂಭದಲ್ಲೇ ಶೇಕಡಾ 9.3ರಷ್ಟು ಕುಸಿತ ಕಂಡ ಷೇರಿನ ಬೆಲೆ 1950ಕ್ಕೆ ಇಳಿದಿತ್ತು. ಕೊನೆಯಲ್ಲಿ 1560.80 ರೂಪಾಯಿಯಾಗಿದ್ದು, ಹೂಡಿಕೆದಾರರಿಗೆ ನಷ್ಟವಾಗಿದೆ.

ಈ ಕುಸಿತ ಇಲ್ಲಿಗೆ ನಿಲ್ಲುವಂತೆ ಕಾಣ್ತಿಲ್ಲ. ವಿದೇಶಿ ಬ್ರೋಕರೇಜ್ ಹೌಸ್ ಮ್ಯಾಕ್ವಾರಿ ಪೇಟಿಎಂ ಷೇರನ್ನು 1200 ರೂಪಾಯಿಗೆ ಇಳಿಸಿದೆ. ದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಇದು ದೊಡ್ಡ ಶಾಕ್ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...