alex Certify ಕೋವಿಡ್ ಕಾಲದ ಆರ್ಥಿಕ ಸಂಕಷ್ಟ ಎದುರಿಸಲು ಇಲ್ಲಿವೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಕಾಲದ ಆರ್ಥಿಕ ಸಂಕಷ್ಟ ಎದುರಿಸಲು ಇಲ್ಲಿವೆ ಟಿಪ್ಸ್‌

ಕೋವಿಡ್ ಸಾಂಕ್ರಮಿಕದಿಂದ ಜಗತ್ತಿನಲ್ಲೆಡೆ ಜನಸಾಮಾನ್ಯರ ದಿನನಿತ್ಯದ ಜೀವನ ಭಾರೀ ಕಷ್ಟವಾಗಿದೆ. ಅದರಲ್ಲೂ ಆರ್ಥಿಕ ಮುಗ್ಗಟ್ಟು ಎಲ್ಲಡೆ ವಕ್ಕರಿಸಿದ್ದು, ಕುಟಂಬಗಳನ್ನು ನಿಭಾಯಿಸುವುದು ಎಲ್ಲರಿಗೂ ಭಾರೀ ಸವಾಲಾಗಿದೆ.

ನೌಕರಿ ಕಳೆದುಕೊಳ್ಳುವುದು ಅಥವಾ ವೇತನ ಕಡಿತದಂಥ ಪರಿಸ್ಥಿತಿಗಳನ್ನು ಎದುರಿಸುವ ಮಂದಿಗೆ ಈ ಸಮಯದಲ್ಲಿ ಆರ್ಥಿಕ ನಿರ್ವಹಣೆ ಇನ್ನಷ್ಟು ಸವಾಲಾಗಿದೆ.

ಸ್ಥಿರ ಆರ್ಥಿಕ ಹೂಡಿಕೆ

ಡೆಟ್ ಫಂಡ್‌ಗಳು, ರೆಕರಿಂಗ್ ಹೂಡಿಕೆಗಳಂಥ ಸ್ಥಿರ ಆದಾಯ ಹೂಡಿಕೆಗಳು ಅಥವಾ ಸ್ಥಿರ ಹೂಡಿಕೆಗಳಿಗೆ ಯಾವುದೇ ಮುಖ್ಯವಾದ ಆರ್ಥಿಕ ಗುರಿ ಇಲ್ಲದೇ ಇರುವ ಕಾರಣ ಇವುಗಳನ್ನು ಹಿಂಪಡೆಯಬಹುದಾಗಿದೆ. ಸಾಮಾನ್ಯವಾಗಿ ಇಂಥ ಹೂಡಿಕೆಗಳಿಂದ ಸಿಗುವ ರಿಟರ್ನ್ಸ್‌ಗಳು ದೀರ್ಘಾವಧಿ ಹೂಡಿಕೆಯ ರಿಟರ್ನ್ಸ್‌‌ಗಿಂತ ಕಡಿಮೆ ಇರುತ್ತವೆ. ಮೆಚ್ಯೂರಿಟಿಗೂ ಮುನ್ನ ರೆಕರಿಂಗ್ ಹೂಡಿಕೆ ಹಿಂಪಡೆಯುವುದರಿಂದ ದಂಡ ಪಾವತಿ ಹಾಗೂ ಬಂಡವಾಳ ಕರಗುವ ಸಾಧ್ಯತೆಗಳು ಇರುತ್ತವೆ.

ಮನೆಯ ‘ಮುಖ್ಯದ್ವಾರ’ದಲ್ಲಿ ಗಣೇಶ ಮೂರ್ತಿಯಿದ್ರೆ ತಪ್ಪದೆ ಓದಿ

ಇಪಿಎಫ್ ನಿಧಿ

ಈ ಅವಧಿಯಲ್ಲಿ ಆದಾಯಗಳಲ್ಲಿ ವ್ಯತ್ಯಯ ಕಾಣುತ್ತಿರುವ ಮಂದಿಗೆ, ಮೂರು ತಿಂಗಳ ಮಟ್ಟಿಗೆ ತಮ್ಮ ಇಪಿಎಫ್ ಖಾತೆಗಳಲ್ಲಿರುವ ಬಾಕಿಯ 75%ರಷ್ಟು ದುಡ್ಡನ್ನು ಹಿಂಪಡೆಯಲು ಅನುವು ಮಾಡಿಕೊಡಲಾಗಿದೆ. ಆದರೆ ಇಪಿಎಫ್ ದುಡ್ಡನ್ನು ಸುಖಾಸುಮ್ಮನೇ ಹಿಂಪಡೆದಲ್ಲಿ ನಿವೃತ್ತಿ ನಂತರದ ಆರ್ಥಿಕ ಭದ್ರತೆ ಮೇಲೆ ಪರಿಣಾಮವಾಗಬಹುದು.

ಕ್ರೆಡಿಟ್ ಕಾರ್ಡ್ ಪಾವತಿಯನ್ನು ಇಎಂಐ ಆಗಿ ಪರಿವರ್ತಿಸುವುದು

ಕ್ರೆಡಿಟ್ ಕಾರ್ಡ್ ಹೊಂದಿದ್ದು ತಮ್ಮ ಬಾಕಿ ಪಾವತಿ ಮಾಡಬೇಕಾದ ಮಂದಿ ತಮ್ಮ ಸಾಲದ ಮರುಪಾವತಿಯನ್ನು ಮಾಸಿಕ ಕಂತುಗಳನ್ನಾಗಿ ಪರಿವರ್ತಿಸಿಕೊಳ್ಳಬಹುದು. ಪಾವತಿ ಮಾಡದೇ ಇರುವ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಮೇಲೆ ಕಟ್ಟುವ ಶುಲ್ಕಗಳಿಗಿಂತ ಮಾಸಿಕ ಕಂತುಗಳ ರೂಪದಲ್ಲಿ ಪಾವತಿ ಮಾಡಿದಾಗ ಬಡ್ಡಿ ಕಡಿಮೆ ಇರುತ್ತದೆ. ಇಎಂಐ ಮರುಪಾವತಿ ಐದು ವರ್ಷಗಳ ಮಟ್ಟಿಗೆ ಕಾಲಾವಕಾಶ ಕೊಟ್ಟಾಗ ಕಾರ್ಡ್‌ದಾರರಿಗೆ ಒಟ್ಟಾರೆ ಸಾಲವನ್ನು ಸಣ್ಣ ಕಂತುಗಳಲ್ಲಿ ಪಾವತಿ ಮಾಡುವ ರಿಲೀಫ್ ಸಿಗುತ್ತದೆ.

ವಾಯುಭಾರ ಕುಸಿತ ಪರಿಣಾಮ ಮುಂಗಾರು ಚುರುಕು, ಇಂದಿನಿಂದ ಭಾರೀ ಮಳೆ ಸಾಧ್ಯತೆ

ಆರ್‌ಬಿಐ ಸೂಚಿತ ರಿಲೀಫ್ ಕ್ರಮಗಳು

ಸಾಂಕ್ರಮಿಕದಿಂದ ಆರ್ಥಿಕ ಹೊಡೆತಕ್ಕೆ ಸಿಕ್ಕ ಮಂದಿಗೆ ರಿಸರ್ವ್ ಬ್ಯಾಂಕ್ ಹಾಲಿ ಸಾಲಗಾರರಾಗಿರುವ ಮಂದಿಗೆ ರಿಲೀಫ್ ಕೊಡಲು ಒಂದಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಲ ಮರುಹೊಂದಾಣಿಕೆಯ ಸ್ಕೀಂನ ಪ್ರಯೋಜನ ಪಡೆಯಲು ಸೆಪ್ಟೆಂಬರ್‌ 30ರವರೆಗೂ ಕಾಲಾವಕಾಶ ಕೊಡಲಾಗಿದೆ. ಮಾರ್ಚ್ 31, 2021ರಂತೆ ’ಸ್ಟಾಂಡರ್ಡ್’ ಎಂದು ಪರಿಗಣಿಸಲಾದ ಸಾಲದ ಖಾತೆಗಳನ್ನು ಹೊಂದಿರುವ, 25 ಕೋಟಿ ರೂ.ಗಳಷ್ಟು ಸಾಲ ಹೊಂದಿರುವ ಮಂದಿ ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ.

ತುರ್ತು ನಿಧಿ

ಉದ್ಯೋಗ ಕಳೆದುಕೊಳ್ಳುವುದು ಅಥವಾ ಅನಾರೋಗ್ಯದಂಥ ಗಂಭೀರ ಸವಾಲುಗಳನ್ನು ಎದುರಿಸಲು ತುರ್ತು ನಿಧಿಯ ಆಯ್ಕೆಯನ್ನು ಕೊಡಲಾಗಿದೆ. ಈ ನಿಧಿಯ ಮೂಲಕ ಆರು ತಿಂಗಳ ಮಟ್ಟಿಗೆ ಅತ್ಯಗತ್ಯವಾದ ಖರ್ಚುಗಳನ್ನು ನಿಭಾಯಿಸಿಕೊಳ್ಳಬಹುದಾಗಿದೆ. ಸದ್ಯದ ಮಟ್ಟಿಗೆ ತುರ್ತು ನಿಧಿಗಳಿಲ್ಲದ ಮಂದಿ ತಮ್ಮ ಭವಿಷ್ಯದ ಅಗತ್ಯತತೆಗಳಿಗಾಗಿ ತುರ್ತು ನಿಧಿಯನ್ನು ಸಂಗ್ರಹ ಮಾಡಿಕೊಳ್ಳುವುದು ಉತ್ತಮ. ಈ ನಿಧಿಗಳನ್ನು ಭಾರೀ ಹಿಂದಿರುಗುವಿಕೆಯ ಖಾತೆಗಳಲ್ಲಿದ್ದರೆ ಅಗತ್ಯವಿದ್ದಾಗ ತುರ್ತು ಹಿಂಪಡೆತ ಸುಲಭವಾಗುತ್ತದೆ.

ಸಾಲಗಳು

ಸಾಲ ಮಂಜೂರು ಮಾಡುವಾಗ ಅರ್ಜಿದಾರರ ಉದ್ಯೋಗ ಹಾಗೂ ಮರುಪಾವತಿ ಸಾಮರ್ಥ್ಯವನ್ನು ಬ್ಯಾಂಕುಗಳು ವಿಶ್ಲೇಷಣೆ ಮಾಡುತ್ತವೆ. ಅದರಲ್ಲೂ ಈ ಸಾಂಕ್ರಮಿಕದ ಕಾಲಘಟ್ಟದಲ್ಲಿ ಬ್ಯಾಂಕುಗಳು ಹಾಗೂ ಬ್ಯಾಂಕಿಂಗ್‌ಯೇತರ ವಿತ್ತೀಯ ಸಂಸ್ಥೆಗಳು ಸಾಲ ಮಂಜೂರು ಮಾಡುವ ವಿಚಾರದಲ್ಲಿ ಇನ್ನಷ್ಟು ಕಟ್ಟುನಿಟ್ಟಾಗಿವೆ. ಈ ಕಾರಣದಿಂದ ಕೋವಿಡ್-19ನಿಂದ ತೀವ್ರವಾದ ಪರಿಣಾಮಗಳನ್ನು ಎದುರಿಸುತ್ತಿರುವ ಜನರು ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಚಿನ್ನದ ಸಾಲ, ಆಸ್ತಿ ಮೇಲೆ ಸಾಲ, ಭದ್ರತೆಗಳ ಮೇಲೆ ಸಾಲಗಳನ್ನು ಆರ್ಥಿಕ ಕಠಿಣತೆ ಎದುರಿಸಲು ಜನರು ಪರಿಗಣಿಸಬಹುದಾಗಿದೆ. ಈ ರೀತಿಯ ಸಾಲಗಳನ್ನು ಬ್ಯಾಂಕುಗಳು ಒದಗಿಸಲು ಮುಂದೆ ಬರುತ್ತವೆ.

ಸೂಕ್ತ ಆರೋಗ್ಯ ವಿಮೆ

ಕೋವಿಡ್-19 ಸಾಂಕ್ರಮಿಕವು ಆರೋಗ್ಯ ವಿಮೆಯ ಮಹತ್ವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಸಾರಿ ಹೇಳುತ್ತಿದೆ. ಒಂದು ಬಾರಿ ಅಚಾನಕ್ಕಾಗಿ ಆಸ್ಪತ್ರೆಗೆ ದಾಖಲಾದರೂ ಇಡೀ ಜೀವನದ ಉಳಿತಾಯವನ್ನು ನುಂಗಿಹಾಕಬಲ್ಲದು. ಉದ್ಯೋಗದಾತರು ಕೊಟ್ಟಿರುವ ಆರೋಗ್ಯ ವಿಮೆಯೊಂದಿಗೆ ಹೆಚ್ಚುವರಿ ಆರೋಗ್ಯ ವಿಮೆಯನ್ನು ಸಹ ಪಡೆದುಕೊಳ್ಳಲು ಜನರು ಚಿಂತಿಸುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...