alex Certify ತೆಲುಗು ಸೂಪರ್​ಸ್ಟಾರ್​​ ಪವನ್​ ಕಲ್ಯಾಣ್​ ಮೂರನೇ ಮದುವೆಯೂ ಮುರಿದು ಬಿತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲುಗು ಸೂಪರ್​ಸ್ಟಾರ್​​ ಪವನ್​ ಕಲ್ಯಾಣ್​ ಮೂರನೇ ಮದುವೆಯೂ ಮುರಿದು ಬಿತ್ತಾ…..?

ತೆಲುಗು ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ತನ್ನ ಮೂರನೇ ಪತ್ನಿಯ ಜೊತೆಯೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪವನ್​ ಕಲ್ಯಾಣ್​​ ಅನ್ನಾ ಲೆಜ್ನೆವಾ ಜೊತೆ 10 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನ್ನಾ ಈಗಾಗಲೇ ಪವನ್​ರಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದ್ದು ಈಗಾಗಲೇ ಅವರು ತಮ್ಮ ಮಕ್ಕಳೊಂದಿಗೆ ರಷ್ಯಾಗೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ವದಂತಿಗಳಿಗೆ ಪವನ್​ ಆಗಲಿ ಅನ್ನಾ ಆಗಲಿ ಈವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

ಪವನ್​ ಕಲ್ಯಾಣ್​ ಹಾಗೂ ಅನ್ನಾ ಲೆಜ್ನೋವಾ ಕಾನೂನಾತ್ಮಕವಾಗಿ ಬೇರ್ಪಟ್ಟಿಲ್ಲವಾದರೂ ಸಹ ಅವರು ಒಟ್ಟಾಗಿ ದಾಂಪತ್ಯ ಜೀವನ ನಡೆಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಪವನ್​ ಕಲ್ಯಾಣ್​ ಕುಟುಂಬದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಅನ್ನಾ ಗೈರಾಗಿದ್ದು ಈ ವದಂತಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಆಗಾಗ ಪವನ್​ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ತಿದ್ದ ಅನ್ನಾ, ಕಳೆದ ತಿಂಗಳು ವರುಣ್​ ತೇಜ್​ ಹಾಗೂ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಪವನ್​ರ ವಾರಾಹಿ ಯಾತ್ರೆಯ ಆರಂಭಕ್ಕೂ ಮುನ್ನ ನಡೆದ ಯಾಗದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಪವನ್​ ತಮ್ಮ ಮಕ್ಕಳೊಂದಿಗೆ ವಿಡಿಯೋ ಕಾಲ್​ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಯಾವುದರ ಬಗ್ಗೆಯೂ ಪವನ್​ ಕಲ್ಯಾಣ್​​​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯಾರಿದು ಅನ್ನಾ ಲೆಜ್ನೋವಾ ?

ಪವನ್​ ಕಲ್ಯಾಣ್​ ಹಾಗೂ ಅನ್ನಾ 2011ರಲ್ಲಿ ತೀನ್​ ಮಾರ್​ ಶೂಟಿಂಗ್​​ ಸಮಯದಲ್ಲಿ ಒಬ್ಬರೊನ್ನಬ್ಬರು ಭೇಟಿಯಾಗಿದ್ದರು. ಈ ಸಮಯದಲ್ಲಿ ಅನ್ನಾ ರಷ್ಯಾದ ರೂಪದರ್ಶಿ ಹಾಗೂ ನಟಿಯಾಗಿದ್ದರು. ಇದಾದ ಬಳಿಕ ಇಬ್ಬರು ಕೆಲ ಕಾಲ ಡೇಟಿಂಗ್​ ನಡೆಸಿದ್ದರು. 2013ರ ಸೆಪ್ಟೆಂಬರ್​ 30ರಂದು ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನ್ನಾಗೆ ತಮ್ಮ ಮೊದಲ ಮದುವೆಯಿಂದ ಪೋಲೆನಾ ಅಂಜನಾ ಪವನ್ನೋವಾ ಎಂಬ ಪುತ್ರಿ ಇದ್ದಳು. ಪವನ್​ ಹಾಗೂ ಅನ್ನಾ 2017ರಲ್ಲಿ ಮಾರ್ಕ್​ ಶಂಕರ್​ ಪವನೋವಿಚ್​ಗೆ ಜನ್ಮ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...