alex Certify ಇದು ಪಿತೃಪ್ರಭುತ್ವವೋ ಅಥವಾ ತಾಯಿ ಪ್ರೀತಿಯೋ…..? ದೇಸಿ ತಾಯಂದಿರು ಏಕೆ ಕೊನೆಯದಾಗಿ ಊಟ ಮಾಡುತ್ತಾರೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಪಿತೃಪ್ರಭುತ್ವವೋ ಅಥವಾ ತಾಯಿ ಪ್ರೀತಿಯೋ…..? ದೇಸಿ ತಾಯಂದಿರು ಏಕೆ ಕೊನೆಯದಾಗಿ ಊಟ ಮಾಡುತ್ತಾರೆ….?

ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಎಲ್ಲರೂ ಊಟವಾದ ಬಳಿಕ ತಾಯಿ ಊಟ ಮಾಡೋದು ಸಾಮಾನ್ಯವಾಗಿರುತ್ತದೆ. ಈ ಕುರಿತಾಗಿ ಇದೀಗ ಟ್ವಿಟ್ಟರ್ ನಲ್ಲಿ ಬಳಕೆದಾರರು ಸಂಭಾಷಣೆಯನ್ನು ಪ್ರಾರಂಭಿಸಿದ್ರು. ದೇಸಿ ಮನೆಗಳಲ್ಲಿ ತಾಯಂದಿರು ಏಕೆ ಕೊನೆಗೆ ತಿನ್ನುತ್ತಾರೆ ಎಂಬುದನ್ನು ಚರ್ಚಿಸಲಾಗಿದೆ.

ಹೌದು, ತಮ್ಮ ಇಡೀ ಕುಟುಂಬಕ್ಕೆ ಸೇವೆ ಸಲ್ಲಿಸುವ ತಾಯಂದಿರು ನಮ್ಮಲ್ಲಿದ್ದಾರೆ. ಕೆಲವೊಮ್ಮೆ, ಅವಳು ಇತರರಿಗಿಂತ ಕಡಿಮೆ ತಿನ್ನುತ್ತಾಳೆ ಅಥವಾ ತಣ್ಣಗಾಗಿರುವ ಊಟ ಮಾಡುತ್ತಾರೆ. ಟ್ವೀಟ್‌ಗೆ ಬಂದ ಪ್ರತಿಕ್ರಿಯೆಗಳನ್ನು ನೋಡಿದ್ರೆ ಯುವ ಪೀಳಿಗೆ ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿವೆ ಎಂದು ತೋರಿಸಿದೆ. ಇದು ಭಾರತೀಯ ಸಂಪ್ರದಾಯ ಮತ್ತು ತಾಯಿಯ ಪ್ರೀತಿ ಎಂದು ಕೆಲವರು ಭಾವಿಸಿದ್ದಾರೆ.

ಬಹುತೇಕ ಮಂದಿ ತಮ್ಮ ತಾಯಿ ಕೂಡ ಎಲ್ಲರೂ ಊಟ ಮಾಡಿದ ಬಳಿಕ ತಾನು ಊಟಕ್ಕೆ ಕೂರುತ್ತಾಳೆ ಎಂದು ಹೇಳಿಕೊಂಡಿದ್ದಾರೆ. ಬಹುತೇಕ ಹೆಣ್ಮಕ್ಕಳು ಮದುವೆಯಾಗಿ, ಮಕ್ಕಳಾದ ನಂತರ ಇದನ್ನೇ ಅನುಸರಿಸಬಹುದು. ಇದು ಭಾರತೀಯ ಸಂಸ್ಕೃತಿ ಎಂದು ಹೇಳಿದ್ದಾರೆ.

ಬಳಕೆದಾರರೊಬ್ಬರು, ತನ್ನ ತಾಯಿ 4 ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಊಟವನ್ನು ತಯಾರಿಸಲು 4 ಗಂಟೆಗೆ ಎದ್ದೇಳುತ್ತಿದ್ದರು. ಇದು ಕುಟುಂಬಕ್ಕಾಗಿ ಅವಳ ಪ್ರೀತಿ ಮತ್ತು ಸಮರ್ಪಣೆಯಾಗಿದೆ ಎಂದಿದ್ದಾರೆ. ಬಹುತೇಕ ಎಲ್ಲಾ ಮನೆಗಳಲ್ಲಿ ಮೊದಲು ತಾಯಿಯನ್ನು ತಿನ್ನುವಂತೆ ಒತ್ತಾಯಿಸಿದರೂ ಅವರು ನಿರಾಕರಿಸುತ್ತಾರೆ. ತಾಯಂದಿರಿಗೆ ಇಷ್ಟೊಂದು ಕಾಳಜಿ ಯಾಕಿರುತ್ತದೆ ಅಂದ್ರೆ, ತನಗೆ ಆಹಾರ ಕಮ್ಮಿಯಾದ್ರೂ ಪರವಾಗಿಲ್ಲ, ಯಾರಿಗೂ ಕೂಡ ಊಟ ಕಡಿಮೆಯಾಗಬಾರದು ಎಂಬುದಾಗಿರುತ್ತದೆ.

— thissinghisfromthighland (@Nicks592) June 13, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...