alex Certify ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ರೋಗಿ; ಎದೆ ನಡುಗಿಸುವ ದೃಶ್ಯದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ರೋಗಿ; ಎದೆ ನಡುಗಿಸುವ ದೃಶ್ಯದ ವಿಡಿಯೋ ವೈರಲ್

ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಲಿಫ್ಟ್ ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ಮೆಟ್ಟಿಲು ಹತ್ತುವ ಶ್ರಮ ತಪ್ಪುತ್ತದಲ್ಲದೆ ಸಮಯದ ಉಳಿತಾಯವೂ ಆಗುತ್ತದೆ. ಆದರೆ ಇದರ ಜೊತೆಗೆ ಲಿಫ್ಟ್ ಗಳನ್ನು ನಿರ್ವಹಿಸುವುದು ಸಹ ಅಷ್ಟೇ ಮುಖ್ಯ ಎಂಬ ಸಂಗತಿ ಈ ವಿಡಿಯೋ ಮೂಲಕ ಸ್ಪಷ್ಟವಾಗುತ್ತದೆ.

ಅಭಿನಯ್ ದೇಶಪಾಂಡೆ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಈ ಸಿಸಿ ಟಿವಿ ದೃಶ್ಯಾವಳಿ ಆಸ್ಪತ್ರೆ ಒಂದರದ್ದು ಎಂದು ಹೇಳಲಾಗಿದ್ದು, ಆದರೆ ಯಾವ ರಾಜ್ಯ ಹಾಗೂ ಊರಿನಲ್ಲಿ ಈ ಘಟನೆ ನಡೆದಿದೆ ಎಂಬುದರ ಯಾವುದೇ ವಿವರ ಲಭ್ಯವಾಗಿಲ್ಲ.

ವಿಡಿಯೋದಲ್ಲಿರುವಂತೆ ರೋಗಿ ಒಬ್ಬರನ್ನು ಸ್ಟ್ರೆಚರ್ ಮೇಲೆ ಇಬ್ಬರು ಸಹಾಯಕರು ಕರೆದುಕೊಂಡು ಬರುತ್ತಾರೆ. ಈ ವೇಳೆ ಓರ್ವ ಸಹಾಯಕ ಲಿಫ್ಟ್ ಒಳಗೆ ಹೋಗಿದ್ದು, ಮತ್ತೊಬ್ಬ ರೋಗಿಯ ಸಮೇತ ಸ್ಟ್ರೆಚರ್ ನ್ನು ಲಿಫ್ಟ್ ಒಳಗೆ ತಳ್ಳಲು ಮುಂದಾಗಿದ್ದಾನೆ.

ಸ್ಟ್ರೆಚರ್ ಅರ್ಧ ಹೋಗಿರುವಾಗಲೇ ಲಿಫ್ಟ್ ಕೆಳಗಿಳಿಯಲು ಆರಂಭಿಸಿದ್ದು, ಅದೃಷ್ಟವಶಾತ್ ರೋಗಿಯ ದೇಹ ಪೂರ್ಣವಾಗಿ ಲಿಫ್ಟ್ ಒಳಗೆ ಹೋಗುತ್ತದೆ. ಅಕಸ್ಮಾತ್ ಕಾಲು ಸಿಕ್ಕಿಹಾಕಿಕೊಂಡಿದ್ದರೆ ಪ್ರಾಣಾಪಾಯ ಸಂಭವಿಸುತ್ತಿತ್ತು. ಇದನ್ನು ನೋಡಿ ಗಾಬರಿಗೊಂಡಿರುವ ನೆಟ್ಟಿಗರು ಬಳಿಕ ರೋಗಿಯ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...