alex Certify ವಿಮಾನದ ಎಮರ್ಜೆನ್ಸಿ ಎಕ್ಸಿಟ್​ನಿಂದ ಹಾರಲು ಹೋದವನೀಗ ಜೈಲು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದ ಎಮರ್ಜೆನ್ಸಿ ಎಕ್ಸಿಟ್​ನಿಂದ ಹಾರಲು ಹೋದವನೀಗ ಜೈಲು ಪಾಲು

ರದ್ದಾದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಟರ್ಮಾಕ್​ನಲ್ಲಿ ಹಾರಲು ಯತ್ನಿಸಿ ಈಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ.

ಲಾಕ್ಡೌನ್ ನಿರ್ಬಂಧ ಸಡಿಲ, ಭಕ್ತರಿಗೆ ಗುಡ್ ನ್ಯೂಸ್: ದೇವರ ದರ್ಶನಕ್ಕೆ ಅವಕಾಶ, ಬಸ್ ಫುಲ್ ರಶ್, ಶಾಲೆಗಳ ಆರಂಭಕ್ಕೆ ಪ್ರತ್ಯೇಕ ತೀರ್ಮಾನ

ಹವಾಮಾನ ವೈಪರಿತ್ಯದಿಂದಾಗಿ ಅಮೆರಿಕದ ಉತ್ತರ ಕೆರೋಲಿನಾದ ಚಾರ್ಲೋಟ್​ನಿಂದ ಮೇರಿಲ್ಯಾಂಡ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುತ್ತಿದ್ದ ಅಮೆರಿಕ ಏರ್​ಲೈನ್​ ವಿಮಾನವನ್ನ ರದ್ದು ಮಾಡಲಾಗಿತ್ತು. 172 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿ ವಿಮಾನವೇರಿದ ಬಳಿಕ ಫ್ಲೈಟ್​ ರದ್ದಾದ ಬಗ್ಗೆ ಮಾಹಿತಿ ನೀಡಲಾಗಿತ್ತು.

ಮನೆಬಾಗಿಲಿಗೆ ಪಡಿತರ ಪೂರೈಕೆ ಸೇರಿದಂತೆ ರಾಜ್ಯದ ಜನತೆಗೆ ಗುಡ್ ನ್ಯೂಸ್

ಈ ಪ್ರಯಾಣಿಕರ ಪೈಕಿ ಓರ್ವ ಬ್ರ್ಯಾಂಡೋನ್​ ಗೋಲ್ಡ್ಡರ್​​ ಎಂಬವರು ಈ ವಿಚಾರವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಜೆಟ್​ ಬ್ರಿಡ್ಜ್​ ನಿರ್ವಹಣೆ ಮಾಡಲು ಯಾರೂ ಇಲ್ಲದ ಕಾರಣ ನಾವು ಅರ್ಧ ಗಂಟೆಗಿಂತಲೂ ಹೆಚ್ಚುಕಾಲ ವಿಮಾನದ ಒಳಗೆ ಇರಬೇಕಾಯ್ತು ಎಂದು ಹೇಳಿದ್ದಾರೆ.

ಆದರೆ ತಾಳ್ಮೆ ಕಳೆದುಕೊಂಡ ಪ್ರಯಾಣಿಕನೊಬ್ಬ ಇನ್ನು ಕಾಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಎಮರ್ಜೆನ್ಸಿ ಗೇಟ್​ನಿಂದ ಟರ್ಮಾಕ್​​ನ ಮೇಲೆ ಹಾರಲು ಯತ್ನಿಸಿದ್ದಾನೆ. ಈ ರೀತಿ ಮಾಡಿದ ಪ್ರಯಾಣಿಕನನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...