alex Certify ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್​ ಕಾಯ್ದಿರಿಸಿದ್ದ ವ್ಯಕ್ತಿಗೆ ಆಗಿದ್ದೇನು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್​ ಕಾಯ್ದಿರಿಸಿದ್ದ ವ್ಯಕ್ತಿಗೆ ಆಗಿದ್ದೇನು ನೋಡಿ…!

ಹೈದರಾಬಾದ್​: ವಿಮಾನದ ಟಿಕೆಟ್ ಕಾಯ್ದಿರಿಸಿದ ವ್ಯಕ್ತಿಯೊಬ್ಬ ನಂತರ ಹೋಗಿ ನೋಡಿದಾಗ ಆಘಾತ ಅನುಭವಿಸಿರುವ ಘಟನೆಯಿಂದ ಹೈದರಾಬಾದ್​ನಲ್ಲಿ ನಡೆದಿದೆ. ಇವರ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲವಾರು ಮಂದಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಆದಿತ್ಯ ವೆಂಕಟೇಶ್ ಎನ್ನುವವರು ಈ ಸುದ್ದಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

ಅವರು ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಏರ್​ಏಷ್ಯಾದಲ್ಲಿ ಅವರು ಟಿಕೆಟ್​ ಕಾಯ್ದಿರಿಸಿದ್ದರು. ನಂತರ ಟಿಕೆಟ್ ಅನ್ನು ಖಚಿತಪಡಿಸಲು ಹೋದಾಗ ಅವರಿಗೆ ಶಾಕ್​ ಕಾದಿತ್ತು.

ಏಕೆಂದರೆ, ಅವರ ಟಿಕೆಟ್​ನಲ್ಲಿ ಬೆಂಗಳೂರಿನಿಂದ ಬೆಂಗಳೂರಿಗೆ ಎಂದು ಬುಕ್​ ಮಾಡಲಾಗಿತ್ತು. ಇದರಿಂದ ತಾವು ಎಷ್ಟು ತೊಂದರೆ ಅನುಭವಿಸಬೇಕಾಗಿ ಬಂತು ಎಂದು ಆಕ್ರೋಶ ಹೊರಹಾಕಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ.

ನಾನು ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನವನ್ನು ಬುಕ್ ಮಾಡಿದ್ದೆ. ಆದರೆ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ತೋರಿಸಲಾಗಿದೆ ಎಂದಿದ್ದಾರೆ. “ಇದು ತಾಂತ್ರಿಕ ದೋಷವಿರಬಹುದು. ದಯವಿಟ್ಟು ಪುಟವನ್ನು ರಿಫ್ರೆಶ್ ಮಾಡಿ ಮತ್ತು ತಾಜಾ ಬುಕಿಂಗ್ ಮಾಡಿ” ಎಂದು ಏರ್​ಏಷ್ಯಾ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...