alex Certify BIG NEWS : ರಾಜ್ಯ ಸರ್ಕಾರದಿಂದ ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ’ ಅಂಗೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರದಿಂದ ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ’ ಅಂಗೀಕಾರ

ಬೆಂಗಳೂರು: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2023ಕ್ಕೆ ಕರ್ನಾಟಕ ವಿಧಾನಸಭೆ ಇಂದು ಧ್ವನಿ ಮತದಿಂದ ಅಂಗೀಕಾರ ನೀಡಿದೆ.

ಮುಖ್ಯಮಂತ್ರಿಗಳ ಪರವಾಗಿ ಸದನದಲ್ಲಿ ಈ ವಿಧೇಯಕ ಮಂಡಿಸಿದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಎಚ್.ಕೆ. ಪಾಟೀಲರವರು ತಿದ್ದುಪಡಿ ಮಸೂದೆಯ ಸಂಕ್ಷಿಪ್ತ ವಿವರಗಳನ್ನು ಮತ್ತು ಮಸೂದೆಯ ಮಂಡನೆಯ ನಂತರ ನಡೆದ ಚರ್ಚೆಗೆ ಸದನದಲ್ಲಿ ಉತ್ತರಿಸಿದರು. ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ 6 ವರ್ತಕ ಸ್ನೇಹಿ ಉಪಕ್ರಮಗಳು ಮತ್ತು 16 ಸುಗಮ ತೆರಿಗೆ ಅನುಸರಣಾ ಮತ್ತು ಆಡಳಿತಾತ್ಮಕ ಉಪಕ್ರಮಗಳಿಗೆ ಸಂಬಂಧಿಸಿದಂತೆ ಅಂಶಗಳನ್ನು ಅಳವಡಿಸಿದೆ ಎಂದು ವಿವರಿಸಿದರು.

ವರ್ತಕ ಸ್ನೇಹಿ ಉಪಕ್ರಮಗಳಲ್ಲಿ ಪ್ರಮುಖವಾಗಿ ರಾಜಿ ತೆರಿಗೆ ಪದ್ಧತಿಯಲ್ಲಿರುವ ವರ್ತಕರು ಇ-ಕಾಮರ್ಸ್ ಆಪರೇಟರ್ಸ್ ಮೂಲಕ ಸರಕು ಪೂರೈಸಲು ಅವಕಾಶ ( To enable composition dealers to make supply through e-commerce operators), ವಿನಾಯಿತಿ ಪೂರೈಕೆದಾರರು ಅನಗತ್ಯವಾಗಿ ನೋಂದಣಿ ಪಡೆಯದೆ ಇರುವ ಅವಕಾಶ ( Option for dealers in exempt supplies not to take registrations) ನೋಂದಣಿ ರದ್ಧತಿ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಸರಳೀಕರಣ ( Simplification of revocation process of cancelled registration), ವರ್ತಕರು ಮರುಪಾವತಿ ಕ್ಲೇಮು ಮಾಡಲು ನಿಖರತೆ ಮತ್ತು ತರ್ಕಬದ್ಧತೆ (To bring certainty and Rationalization for refund claims), ವಿಳಂಬ ಮರುಪಾವತಿಗಳಿಗೆ ಬಡ್ಡಿ ಲೆಕ್ಕಾಚಾರ ನಿರ್ಧರಿಸುವ ವಿಧಾನ (To prescribe the manner of Interest computation on delayed refunds), ಕರನಿರ್ಧರಣೆ ಹಿಂಪಡೆದು ರಿಟರ್ನ್ ಸಲ್ಲಿಸಲು ಕಾಲಮಿತಿ ವಿಸ್ತರಣೆ (Extension of time to file returns in case on Non-filer assessments)- ಇವೆ ಮುಂತಾದ ವರ್ತಕ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತರಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಿದೆ ಎಂದು ವಿವರಿಸಿದರು.

ಸುಗಮ ತೆರಿಗೆ ಅನುಸರಣಾ ಮತ್ತು ಆಡಳಿತಾತ್ಮಕ ಉಪಕ್ರಮಗಳಲ್ಲಿ ಪ್ರಮುಖವಾಗಿ ಹೂಡವಳಿ ತೆರಿಗೆ ಜಮೆ ತೆಗೆದುಕೊಳ್ಳಲು ಅರ್ಹತೆ ಮತ್ತು ಷರತ್ತುಗಳು (Eligibility and conditions for taking input tax credit (ITC)), ಹೊರಮುಖ ಪೂರೈಕೆಗಳ ವಿವರಗಳನ್ನು ಒದಗಿಸುವುದಕ್ಕೆ ಸಂಬಂಧಿಸಿರುತ್ತದೆ (Furnishing details of outward supplies) ರಿಟರ್ನ್ಗಳನ್ನು ಸಲ್ಲಿಸುವಿಕೆ (Furnishing of returns), ವಾರ್ಷಿಕ ರಿಟರ್ನ್ ಸಲ್ಲಿಸುವಿಕೆ (Furnishing of Annual return), ಮೂಲದಲ್ಲಿ ತೆರಿಗೆ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ (Collection of tax at source), ಜಿಎಸ್ಟಿ ಅಪೀಲು ನ್ಯಾಯಾಧೀಕರಣಕ್ಕೆ ಸಂಬಂಧಿಸಿದಂತೆ ತತ್ಸಂಬಂಧ ತಿದ್ದುಪಡಿ (Consequential Amendments relating to GST Appellate Tribunal), ಕೆಲವೊಂದು ಅಪರಾಧಗಳಿಗೆ ದಂಡನೆಗಳು (Punishment of certain offences), ಘೋಷಣೆಗೆ ಸಂಬಂಧಿಸಿದ ಇಂತಹ ಸುಗಮ ತೆರಿಗೆ ಅನುಸರಣಾ ಮತ್ತು ಆಡಳಿತಾತ್ಮಕ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸದನದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ವಿವರಿಸಿದರು.

ಸದನದಲ್ಲಿ ನಡೆದ ಚರ್ಚೆಗೆ ಉತ್ತರವಾಗಿ ಸಚಿವ ಎಚ್.ಕೆ. ಪಾಟೀಲರು ಜಿ.ಎಸ್.ಟಿ. ವ್ಯವಸ್ಥೆ ಜಾರಿಗೆ ಬಂದ ಮೇಲೆ ಕರ್ನಾಟಕದ ಜಿ.ಎಸ್.ಟಿ. ಸಂಗ್ರಹ ದ್ವೀಗುಣಗೊಂಡಿದೆ. 2017-18ರಲ್ಲಿ ರೂ. 44 ಸಾವಿರ ಕೋಟಿಯಿಂದ ಜಿ.ಎಸ್.ಟಿ. ಸಂಗ್ರಹ 2022-23ರಲ್ಲಿ ರೂ. 81,848 ಕೋಟಿಗೆ ಹೆಚ್ಚಳಗೊಂಡಿದೆ. ಜಾರಿ ಪ್ರಕರಣಗಳನ್ನು ಪರಿಗಣಿಸುವುದಾದರೆ 11,733 ಪ್ರಕರಣಗಳನ್ನು ತಪಾಸಣೆ ಮಾಡಿ 1,320 ಕೋಟಿ ಕರ ಮತ್ತು ದಂಡ ವಸೂಲಾತಿ 2022-23ನೇ ಸಾಲಿನಲ್ಲಿ ಮಾಡಲಾಗಿದೆ. 5 ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರಗಳಿಗೆ ಈ ಇನ್ವೈಸ್ನ್ನು ಜಾರಿಗೆ ತರಲಾಗಿದ್ದು ಕರ್ನಾಟಕದಲ್ಲಿ ಖೊಟ್ಟಿ ಅಥವಾ ನಕಲಿ ಜಿ.ಎಸ್.ಟಿ. ಸಂಖ್ಯೆಗಳ ವಿರುದ್ಧದ ಪತ್ತೆ ಹಚ್ಚುವಿಕೆಯಲ್ಲಿ 1,600 ಪ್ರಕರಣಗಳನ್ನು ಪತ್ತೆ ಹಚ್ಚಿ ಅವರ ನೋಂದಣಿಯನ್ನು ರದ್ದುಪಡಿಸಲಾಗಿದೆ ಎಂದು ಸದನದ ಗಮನಕ್ಕೆ ತಂದರು. ಸರಕು ಸಾಗಣೆಗಳ ವ್ಯವಹಾರದಲ್ಲಿ 40 ಲಕ್ಷ ರೂಪಾಯಿಗಳರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದು. ಸೇವೆಗಳ ವ್ಯವಹಾರದಲ್ಲಿ 20 ಲಕ್ಷ ರೂಪಾಯಿಗಳರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದು ಎಂದು ಸಚಿವರು ಸದನದ ಗಮನಕ್ಕೆ ತಂದರು. ವ್ಯಾಟ್ ವ್ಯವಸ್ಥೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ 5.8 ಲಕ್ಷ ವರ್ತಕರು ವ್ಯಾಟ್ ಪಾವತಿಸುತ್ತಿದ್ದರೆ ಜಿ.ಎಸ್.ಟಿ. ಅವಧಿಯಲ್ಲಿ 10 ಲಕ್ಷ ವರ್ತಕರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಜಿ.ಎಸ್.ಟಿ. ಸಂಗ್ರಹದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಅಂದರೆ ಶೇ. 21 ರಷ್ಟು ಹೆಚ್ಚು ಪ್ರಮಾಣದ ತೆರಿಗೆಯನ್ನು 2023-24ರ ಮೊದಲ ತ್ರೈಮಾಸಿಕದಲ್ಲಿ ಸಂಗ್ರಹಿಸಲಾಗಿದೆ ಎಂದು ಸಚಿವರು ವಿವರಿಸಿದಾಗ ಸದಸ್ಯರು ಮೇಜು ಗುದ್ದಿ ಮೆಚ್ಚುಗೆ ವ್ಯಕ್ತಪಡಿಸಿದರು.ಇದಾದ ನಂತರ ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರು ನೀಡಿದ ಸಲಹೆ-ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...