alex Certify ತರಬೇತುದಾರರಿಲ್ಲದೆ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಕಥುನಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಬೇತುದಾರರಿಲ್ಲದೆ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಕಥುನಿಯಾ

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ನಡುವೆ ಯಾವುದೇ ತರಬೇತುದಾರರಿಲ್ಲದೆ ಯೋಗೀಶ್ ಕಥುನಿಯಾ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ವಿಶೇಷವಾಗಿದೆ.

24ರ ಹರೆಯದ ಯೋಗೀಶ್ ಅವರು ಕಳೆದ ಒಂದು ವರ್ಷದಿಂದ ಯಾವುದೇ ತರಬೇತಿದಾರರ ಮಾರ್ಗದರ್ಶನವಿಲ್ಲದೆ ಸ್ವತಃ ಅಭ್ಯಾಸ ಮಾಡಿ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಯೋಗೀಶ್, ದೆಹಲಿಯ ಕಿರೋರಿಮಲ್ ಕಾಲೇಜಿನಲ್ಲಿ ಬಿ.ಕಾಂ. ಪದವೀಧರನಾಗಿದ್ದು, ಪ್ಯಾರಾಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಡಿಸ್ಕಸ್ ಅನ್ನು 44.38 ಮೀ. ದೂರಕ್ಕೆ ಎಸೆಯುವ ಮುಖಾಂತರ ಬೆಳ್ಳಿ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದಾರೆ.

BIG NEWS: ಮಾದಕ ಬ್ಯೂಟಿ ಹೆಸರಲ್ಲಿ ಕಾಸ್ಮೆಟಿಕ್; ವಿಚಾರಣೆ ವೇಳೆ ಸೋನಿಯಾ ಬಾಯ್ಬಿಟ್ಟ ರಹಸ್ಯವೇನು….?

“ಬೆಳ್ಳಿ ಪದಕ ಗೆದ್ದಿರುವುದು ನನಗೆ ಪ್ಯಾರಿಸ್ 2024ರಲ್ಲಿ ಚಿನ್ನದ ಪದಕ ಗೆಲ್ಲಲು ಹೆಚ್ಚು ಪ್ರೇರಣೆ ನೀಡಿದಂತಾಗಿದೆ” ಎಂದು ಅವರು ಹೇಳಿದ್ದಾರೆ. ಕೊರೋನಾ ಲಾಕ್ ಡೌನ್ ಪರಿಣಾಮದಿಂದ ಕಳೆದ 18 ತಿಂಗಳಿನಿಂದ ಅಭ್ಯಾಸ ನಡೆಸುವುದು ಬಹಳ ಕಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ.

“ದಿನನಿತ್ಯ ಕ್ರೀಡಾಂಗಣಕ್ಕೆ ಬಂದು ಅಭ್ಯಾಸ ಮಾಡುತ್ತಿದ್ದೆ. ನನಗೆ ಯಾವುದೇ ಮಾರ್ಗದರ್ಶಕರಿರಲಿಲ್ಲ. ಇನ್ನೂ ಕೂಡ ತರಬೇತುದಾರರಿಲ್ಲದೆ ಅಭ್ಯಾಸ ಮಾಡುತ್ತಿದ್ದೇನೆ. ತರಬೇತುದಾರರಲಿಲ್ಲದೆ ಬೆಳ್ಳಿ ಪದಕ ಗೆದ್ದಿರುವುದು ಉತ್ತಮ ಕ್ಷಣ” ಎಂದು ಯೋಗೀಶ್ ಹೇಳಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...