alex Certify ತಿಂಡಿ ತಿನ್ನುತ್ತಲೇ ಪ್ಯಾರಾಗ್ಲೈಡಿಂಗ್​ ಮಾಡಿದ ಸಾಹಸಿ : ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಡಿ ತಿನ್ನುತ್ತಲೇ ಪ್ಯಾರಾಗ್ಲೈಡಿಂಗ್​ ಮಾಡಿದ ಸಾಹಸಿ : ವಿಡಿಯೋ ವೈರಲ್​

ಪ್ಯಾರಾಗ್ಲೈಡಿಂಗ್ ಒಂದು ರೋಮಾಂಚಕ ಕ್ರೀಡೆ. ಈ ಕ್ರೀಡೆಯಲ್ಲಿ ಭಾಗವಹಿಸಿದವರು ಉಸಿರುಕಟ್ಟುವ ಅನುಭವದ ಜೊತೆ ಜೊತೆಗೆ ವೈಮಾನಿಕವಾಗಿ ಕಾಣುವ ದೃಶ್ಯವನ್ನು ಕಂಡು ಮೂಕ ವಿಸ್ಮಿತರಾಗುತ್ತಾರೆ.

ಇದರ ಜೊತೆಗೆ ಮೊದಲ ಬಾರಿ ಪ್ಯಾರಾಗ್ಲೈಡಿಂಗ್ ಮಾಡುವವರು ಭಯಭೀತರಾಗಿ ಒಮ್ಮೆ ಇಳಿದು ಬಿಡುವ ಎಂದು ಕಾತರದಿಂದ ಕಾಯುತ್ತಿರುತ್ತಾರೆ. ಆದ್ರೆ ಇದೆಲ್ಲದಕ್ಕೆ ತದ್ವಿರುದ್ದ ಎನ್ನುವಂತೆ ಸ್ಕೈಡೈವರ್ ಮತ್ತು ಸಾಹಸ ಕ್ರೀಡೆಗಳ ಉತ್ಸಾಹಿಯಾಗಿರುವ ಓಸ್ಮರ್ ಒಚೋವಾ ವಿಶಿಷ್ಟವಾಗಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸುವ ಸಾಹಸವೊಂದನ್ನು ಮಾಡಿದ್ದಾರೆ. ಈ ಸಾಹಸದ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೀಡಿಯೊದಲ್ಲಿ, ಓಚೋವಾ ಅವರು ಪ್ಯಾರಾಗ್ಲೈಡಿಂಗ್ ಮಾಡುವ ಸಂದರ್ಭದಲ್ಲಿ ನೆಲದಿಂದ ನೂರಾರು ಅಡಿ ಎತ್ತರದಲ್ಲಿ ಆಹಾರವೊಂದನ್ನು ತಯಾರಿಸುತ್ತಿರುವುದು ಕಂಡು ಬಂದಿದೆ. ಬಟ್ಟಲಿನಲ್ಲಿ ಸಿರಿ ಧಾನ್ಯಗಳಿಗೆ ಹಾಲು ಮಿಕ್ಸ್ ಮಾಡಿ ಫುಡ್ ತಯಾರಿಸಿದ್ದಾರೆ. ವೇಗವಾಗಿ ಗಾಳಿ ಬೀಸುತ್ತಿದ್ದರೂ ತನ್ನ ಬ್ಯಾಗ್‌ನೊಳಗಿಂದ ಒಂದು ಬಟ್ಟಲು, ಧಾನ್ಯದ ಪ್ಯಾಕೆಟ್ ಮತ್ತು ಹಾಲಿನ ಬಾಕ್ಸ್‌ನ್ನು ಹೊರಗಡೆ ತೆಗೆಯುತ್ತಾರೆ. ಈ ಓಟ್ಸ್ ತಯಾರಿಸುವುದರ ಜೊತೆ ಉಪಾಹಾರಕ್ಕಾಗಿ ಬಾಳೆಹಣ್ಣನ್ನು ಸಹ ಸ್ಲೈಸ್ ಆಗಿ ಆಕಾಶಮಾರ್ಗದಲ್ಲಿ ಕತ್ತರಿಸುತ್ತಾರೆ. ಈ ಸಂದರ್ಭ ಒಂದು ತುಂಡು ಕೆಳಗೆ ಬೀಳುತ್ತದೆ. ಇಷ್ಟಾದರೂ ಸಹ ಸ್ವಲ್ಪವೂ ವಿಚಲಿತರಾಗದೆ, ಓಚೋವಾ ಅವರು ಸುರಕ್ಷಿತವಾಗಿ ಭೂಮಿಗೆ ಇಳಿಯುವ ಮೊದಲು ಅವರು ತಯಾರಿಸಿದ ತಿಂಡಿಯನ್ನು ತಿಂದು ಪ್ಲೇಟ್ ಖಾಲಿ ಮಾಡುತ್ತಾರೆ.‌

ಸೆಪ್ಟೆಂಬರ್ 12 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಬಳಿಕ ಈ ವೀಡಿಯೊ 32 ಮಿಲಿಯನ್ ವ್ಯೂವ್ಸ್ ಆಗಿದೆ. ಸಾಕಷ್ಟು ಮಂದಿ ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಸಾಹಸಿಯು ಗಾಳಿಯಲ್ಲಿ ಊಟವನ್ನು ಆನಂದಿಸುತ್ತಿರುವುದು ಇದು ಮೊದಲಲ್ಲ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಕಳೆದ ವರ್ಷ, ಮತ್ತೊಬ್ಬ ಥ್ರಿಲ್-ಸೀಕರ್ ಮೆಕೆನ್ನಾ ನೈಪ್ ಎಂಬವರು ಸ್ಕೈಡೈವಿಂಗ್ ಮಾಡುವಾಗ ಪಿಜ್ಜಾ ಸ್ಲೈಸ್ ಅನ್ನು ತಿನ್ನುವ ವೀಡಿಯೊವನ್ನು ಶೇರ್ ಮಾಡಿದ್ರು. ಈ ಸಾಹಸವು ನೆಪೋಲಿಯನ್ ಕೆಫೆಯ ಪ್ರಚಾರಕ್ಕಾಗಿ ಮಾಡಲಾಗಿತ್ತು. ನೆಪೋಲಿಯನ್ ಕೆಫೆ ಅಮೇರಿಕಾದ ಜಾಕ್ಸನ್ ಮಿಚಿಗನ್‌ನಲ್ಲಿರುವ ಸ್ಥಳೀಯ ಹೋಟೆಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...