alex Certify ಪೋಸ್‌ ಕೊಟ್ಟು ವಿಡಿಯೋ ಪೋಸ್ಟ್‌ ಮಾಡಿದ ಪಾಕ್ ಸಚಿವನಿಗೆ ಟ್ರೋಲ್‌ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್‌ ಕೊಟ್ಟು ವಿಡಿಯೋ ಪೋಸ್ಟ್‌ ಮಾಡಿದ ಪಾಕ್ ಸಚಿವನಿಗೆ ಟ್ರೋಲ್‌ ಸುರಿಮಳೆ

Pakistan's Interior Minister Rowing a Boat to 'Nowhere' Has Set Off a Wave of Memes

ಪಾಕಿಸ್ತಾನದ ಒಳಾಡಳಿತ ವ್ಯವಹಾರಗಳ ಸಚಿವ ಶೇಯ್ಖ್ ರಶೀದ್ ಅಹ್ಮದ್‌ಗೆ ವಿವಾದಗಳು ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣ ಹಾಗೂ ಬಿಡುಗಡೆಯ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೇ ಅನುಮಾನದ ಪ್ರಶ್ನೆಗಳನ್ನು ಕೇಳಿದ್ದ ರಶೀದ್‌ ಇದೀಗ ನಗೆಪಾಟಲಿಗೀಡಾಗುವ ಸನ್ನಿವೇಶದಲ್ಲಿ ಸಿಲುಕಿದ್ದಾರೆ.

ಈದ್ ಹಬ್ಬದ ಆಚರಣೆಯಲ್ಲಿರುವ ರಶೀದ್, ಕೆರೆಯೊಂದರಲ್ಲಿ ಬೋಟಿಂಗ್ ಮಾಡುತ್ತಾ ತಮ್ಮದೇ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. “ಈದ್‌ನ ಎರಡನೇ ದಿನ: ಒಳಾಡಳಿತ ಸಚಿವ ಶೇಯ್ಖ್‌ ರಶೀದ್ ಅಹ್ಮದ್ ಫ್ರೀಡಂ ಹೌಸ್‌ನಲ್ಲಿ ಸೇಲಿಂಗ್ ಮಾಡುತ್ತಿದ್ದಾರೆ” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ರಶೀದ್.

KBC ಯಲ್ಲೂ ಭಾಗವಹಿಸಿದ್ದರು ಭೂಕುಸಿತದಲ್ಲಿ ಬಲಿಯಾದ ವೈದ್ಯೆ

49ಸೆಕೆಂಡ್‌ಗಳ ಈ ವಿಡಿಯೋವನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿರುವ ರಶೀದ್, ದೋಣಿ ಮೇಲೆ ಕುಳಿತು ಅದನ್ನು ಮುನ್ನಡೆಸುತ್ತಲೇ ಇಲ್ಲವೆಂದು ಕಂಡುಕೊಂಡ ಪಾಕಿಸ್ತಾನೀ ನೆಟ್ಟಿಗರು ಈ ವಿಡಿಯೋವನ್ನು ಭಾರೀ ಮೀಮ್‌ ಮೆಟೀರಿಯಲ್ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...