ಸೋಶಿಯಲ್ ಮೀಡಿಯಾದಲ್ಲಿ ಗಾಯಕರಿಗೇನು ಕಡಿಮೆ ಇಲ್ಲ. ಸಾಕಷ್ಟು ಯುವ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನ ಗಳಿಸುವ ಪ್ರಯತ್ನದಲ್ಲಿದ್ದಾರೆ, ಈ ಎಲ್ಲದರ ನಡುವೆ ಪಾಕಿಸ್ತಾನದ ಯುವ ವೈದ್ಯೆಯಾದ ಡಾ. ರಿದಾ ಇರ್ಫಾನ್ ಖಾನ್ ಅವರು ನುಸ್ರತ್ ಫತೇಹ್ ಅಲಿ ಖಾನ್ರ ಪ್ರಸಿದ್ಧ ಘಜಲ್ಗೆ ಧ್ವನಿಯಾಗಿದ್ದಾರೆ, ಈ ವಿಡಿಯೋವನ್ನ ರಿದಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಇತ್ತೀಚಿನ ವಿಡಿಯೋವೊಂದರಲ್ಲಿ ರಿಧಾ ʼಕಾಲಿ ಕಾಲಿ ಝುಲ್ಫೋಂಕೆʼ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು 1989ರಲ್ಲಿ ತೆರೆ ಕಂಡ ಆಲ್ಬಂ ಸಾಂಗ್ ಆಗಿದೆ. ಹಾಡಿನ ಜೊತೆಯಲ್ಲಿ ರಿಧಾ ಗಿಟಾರ್ ಕೂಡ ನುಡಿಸಿದ್ದಾರೆ.
ಸಂಚಲನ ಸೃಷ್ಟಿಸಿದ ’ಚೆಲ್ಲಮ್ ಸರ್’
ವೈದ್ಯೆ ರಿಧಾರ ಕಂಠಸಿರಿ ಇನ್ಸ್ಟಾಗ್ರಾಂ ಬಳಕೆದಾರರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಟ್ವಿಟರ್ನಲ್ಲೂ ಈ ವಿಡಿಯೋವನ್ನ ಶೇರ್ ಮಾಡಲಾಗಿದ್ದು ಟ್ವೀಟಿಗರೂ ಸಹ ರಿಧಾರ ಧ್ವನಿಗೆ ಮಾರು ಹೋಗಿದ್ದಾರೆ.
https://www.instagram.com/tv/CPLmZRoB1mE/?utm_source=ig_web_copy_link