alex Certify ಇಲ್ಲಿದೆ 2022 ರ ಅತ್ಯಂತ ಜನಪ್ರಿಯ ಹಾಗೂ ಮೊದಲ ಮೀಮ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2022 ರ ಅತ್ಯಂತ ಜನಪ್ರಿಯ ಹಾಗೂ ಮೊದಲ ಮೀಮ್‌

ಮೀಮ್‌ ಸೃಷ್ಟಿಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಲವರಿದ್ದಾರೆ. ಅವರ ಕ್ರಿಯಾಶೀಲತೆಯಿಂದ ಕೂಡಿದ ಮೀಮ್‌ಗಳು ಫೇಸ್‌ಬುಕ್‌ನಿಂದ ವಾಟ್ಸ್ಯಾಪ್‌ಗೂ ಹಬ್ಬಿಕೊಂಡು ಕೋಟ್ಯಂತರ ಬಾರಿ ಫಾರ್ವರ್ಡ್‌ ಆಗುತ್ತವೆ. ಇಂಥ ಜನಪ್ರಿಯ ಮೀಮ್‌ಗಳ ಪೈಕಿ 2022ರ ಹೊಸ ವರ್ಷದಲ್ಲಿ ಅತ್ಯಂತ ಜನಪ್ರಿಯವಾಗಿದ್ದು ಹಾಗೂ ಮೊದಲ ಮೀಮ್‌ ಎನಿಸಿದ್ದು ಪಾಕಿಸ್ತಾನಿ ನಟ ಅದ್ನಾನ್‌ ಸಿದ್ದಿಕಿಯದ್ದು.

ಹೌದು, ಆತನಿಗೆ ಕೂಡ ತಾನು ತೆಗೆಯುವ ಒಂದು ಸೆಲ್ಫೀ ವಿಶ್ವಾದ್ಯಂತ ಕಾಲೆಳೆಯಲು ಬಳಸಲಾಗುವುದು ಎಂಬ ಊಹೆ ಇರಲಿಲ್ಲ. ಕರಾಚಿಯಲ್ಲಿ ಸಿಕ್ಕಂತಹ ಮಾದಕ ವಸ್ತುಗಳನ್ನು ಸಾಮೂಹಿಕವಾಗಿ ಮೈದಾನವೊಂದರಲ್ಲಿ ಸುರಿದು ಅಧಿಕಾರಿಗಳು ಬೆಂಕಿ ಹಾಕಿದ್ದಾರೆ. ಜೋರಾದ ಅಗ್ನಿಜ್ವಾಲೆಯ ಎದುರು ನಿಂತುಕೊಂಡು ನಟ ಸಿದ್ದಿಕಿ ಸೆಲ್ಫೀ ಕ್ಲಿಕ್ಕಿಸಿದ್ದಾರೆ. ಅದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಅಷ್ಟೇ.

ಸೈಬರ್ ಕಳ್ಳರಿಂದ ಮಹಾವಂಚನೆ, 95 ಲಕ್ಷ ರೂ. ಕಳೆದುಕೊಂಡ ಮಾಜಿ ಸೈನಿಕ..!

ಆದರೆ, ಆ ಫೋಟೊವನ್ನು ಮೀಮ್‌ ಪ್ರಿಯರು, ಹಿಂದೆ ಮನೆಯೇ ಹೊತ್ತಿಕೊಂಡು ಉರಿಯುತ್ತಿದ್ದರೂ ಸೆಲ್ಫೀ ಪ್ರಿಯನೊಬ್ಬ ತನ್ನ ಕಾರ್ಯದಲ್ಲಿ ಮಗ್ನನಾಗಿದ್ದ ಎಂಬಂತೆ ಕಿತಾಪತಿಯ ಸಂದೇಶಗಳನ್ನು ಹರಿಬಿಟ್ಟಿದ್ದಾರೆ.

’’ನೋಡಿ ಹಿಂದೆ ಹೊತ್ತಿ ಉರಿಯುತ್ತಿರುವುದು ನಾನು ವಿದೇಶಗಳಲ್ಲಿ ಅನುಭವಿಸುವ ನರಕಯಾತನೆ, ಆದರೆ ಸೆಲ್ಫೀಯಲ್ಲಿ ಪಾಕಿಸ್ತಾನಿ ಬಾಂಧವರು ಮಾತ್ರ ನನ್ನನ್ನು ಹೀರೋ ರೀತಿಯ ಜೀವನ ಎಂದು ಭಾವಿಸಿದ್ದಾರೆ’’ ಎಂದು ಮೀಮ್‌ವೊಂದು ಸೃಷ್ಟಿಸಲಾಗಿದೆ.

ಹಿಂದೆ ಹೊತ್ತಿ ಉರಿಯುತ್ತಿರುವುದು ನನ್ನ ಜೀವನ, ಆದರೂ ಸೆಲ್ಫಿಯಲ್ಲಿ ಸ್ನೇಹಿತರಿಗೆ ಜೀವನ ನಿರ್ವಹಣೆ ಬಗ್ಗೆ ಉಚಿತ ಉಪದೇಶ ಕೊಡುತ್ತಿದ್ದೇನೆ ಎನ್ನುವ ಮೀಮ್‌ ಭಾರಿ ಜನಪ್ರಿಯವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...