alex Certify ಅಧಿಕಾರಿಗಳಿಗೆ ʼಸಂಬಳʼ ನೀಡಲೂ ಇಮ್ರಾನ್‌ ಸರ್ಕಾರದ ಪರದಾಟ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗಳಿಗೆ ʼಸಂಬಳʼ ನೀಡಲೂ ಇಮ್ರಾನ್‌ ಸರ್ಕಾರದ ಪರದಾಟ…?

ಪಾಕಿಸ್ತಾನದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂದು ಸೆರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಟ್ವೀಟ್​ ಮಾಡಿದ್ದು ಇಮ್ರಾನ್​ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದೆ.

ಸೆರ್ಬಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್​ ಖಾತೆಯಿಂದಲೇ ಈ ಪೋಸ್ಟ್​ ಮಾಡಲಾಗಿದೆ. ಈ ಖಾತೆಯಲ್ಲಿ ಸಂಬಳವೇ ಇಲ್ಲದೇ ಪಾಕಿಸ್ತಾನ ಸರ್ಕಾರಕ್ಕಾಗಿ ಎಷ್ಟು ದಿನ ಎಂದು ಕೆಲಸ ಮಾಡಲು ಸಾಧ್ಯ..? ಎಂದು ಪ್ರಶ್ನಿಸಲಾಗಿದೆ.

ಆದರೆ ರಾಯಭಾರ ಕಚೇರಿಯ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರವು ಸಬೂಬು ನೀಡಿದೆ.

ಇನ್ನೂ ಎಷ್ಟು ಸಮಯದವರೆಗೆ ಇಮ್ರಾನ್​ ಖಾನ್​ ಸರ್ಕಾರದ ಅಧಿಕಾರಿಗಳು ಮೌನವಾಗಿ ಇರುತ್ತೀರಿ..? ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೇ ನಿಮ್ಮ ಸರ್ಕಾರಕ್ಕಾಗಿ ದುಡಿಯುತ್ತಿದ್ದಾರೆ. ಶಾಲೆಯಲ್ಲಿ ಶುಲ್ಕ ಪಾವತಿ ಮಾಡದ ಕಾರಣ ಮಕ್ಕಳನ್ನು ಶಾಲೆಯಿಂದ ಹೊರಗಟ್ಟಲಾಗಿದೆ. ಹೊಸ ಪಾಕಿಸ್ತಾನ ಅಂದರೆ ಇದೇನಾ..? ಎಂದು ಟ್ವಿಟರ್​ನಲ್ಲಿ ಪ್ರಶ್ನಿಸಲಾಗಿದೆ.

ಈ ಟ್ವೀಟ್​ ವೈರಲ್​ ಆಗುತ್ತಿದ್ದಂತೆಯೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್​ ಮಾಡಿದ್ದು ಸರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಟ್ವಿಟರ್​, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್​ ಮಾಡಲಾಗಿದೆ. ಈ ಖಾತೆಗಳಲ್ಲಿ ಪೋಸ್ಟ್​ ಮಾಡಲಾಗುತ್ತಿರುವ ಯಾವುದೇ ಸಂದೇಶಗಳು ಸಬಿರ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...