alex Certify Pakistan: ಒಳ ಚರಂಡಿಯಲ್ಲಿ ಭಾರೀ ಸ್ಫೋಟ..! 10 ಮಂದಿ ಸಾವು, 13 ಮಂದಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Pakistan: ಒಳ ಚರಂಡಿಯಲ್ಲಿ ಭಾರೀ ಸ್ಫೋಟ..! 10 ಮಂದಿ ಸಾವು, 13 ಮಂದಿಗೆ ಗಾಯ

ದಕ್ಷಿಣ ಪಾಕಿಸ್ತಾನದ ಒಳಚರಂಡಿಯೊಂದರಲ್ಲಿ ಉಂಟಾದ ಬ್ಲಾಸ್ಟ್​ನಲ್ಲಿ ಬರೋಬ್ಬರಿ 10 ಮಂದಿ ಸಾವನ್ನಪ್ಪಿದ್ದರೆ 13ಕ್ಕೂ ಅಧಿಕ ಮಂದಿ ಗಾಯಗೊಂಡಂತಹ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಪೊಲೀಸ್​ ಇಲಾಖೆ ವಕ್ತಾರ ಸೋಹೈಲ್​ ಝೋಕಿಯೋ ಒಳಚರಂಡಿಯಲ್ಲಿ ಸಂಗ್ರಹವಾಗಿದ್ದ ಅನಿಲವು ಹೊತ್ತಿಕೊಂಡ ಪರಿಣಾಮ ಕರಾಚಿಯಲ್ಲಿ ಈ ಸ್ಪೋಟ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ಸ್ಪೋಟಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ತಜ್ಞರ ತಂಡ ಈ ಸಂಬಂಧ ಶೋಧ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು.

ಈ ಅವಘಡದಲ್ಲಿ 10 ಮಂದಿ ಸಾವನ್ನಪ್ಪಿದ್ದರೆ 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಮೂವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ಒಳಚರಂಡಿಯ ಸಮೀಪದಲ್ಲಿದ್ದ ಕಟ್ಟಡಗಳ ಕಿಟಕಿ ಗಾಜು ಹಾಗೂ ವಾಹನಗಳಿಗೆ ಹಾನಿ ಉಂಟಾಗಿದೆ ಎಂದು ಸೋಹೈಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...