ಮನೆಗೆ ಪೇಂಟ್ ಮಾಡಿಸಬೇಕು ಎಂದು ಯೋಚನೆ ಮಾಡ್ತಾ ಇದ್ದರೆ ನಾಳೆಯಿಂದ ನಿಮಗೆ ಜೇಬು ಕೊಂಚ ಜಾಸ್ತಿಯೇ ಸುಡಲಿದೆ. ಏಕೆಂದರೆ ಪ್ರಸಿದ್ಧ ಪೇಂಟ್ ತಯಾರಕರು ಬಣ್ಣಗಳ ದರದಲ್ಲಿ 5 – 10 ಪ್ರತಿಶತ ಏರಿಕೆ ಮಾಡಿದ್ದಾರೆ. ಹಣದುಬ್ಬರವನ್ನು ಎದುರಿಸುತ್ತಿರುವ ಏಷ್ಯನ್ ಪೇಂಟ್ಸ್, ಬರ್ಗರ್ ಪೇಂಟ್ಸ್ ಹಾಗೂ ಇಂಡಿಗೋ ಪೇಂಟ್ಸ್ ಸೇರಿದಂತೆ ಪ್ರಸಿದ್ಧ ಪೇಂಟ್ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪೇಂಟಿಂಗ್ ಕ್ಷೇತ್ರದ ದಿಗ್ಗಜ ಏಷಿಯನ್ ಪೇಂಟ್ಸ್ ಬೆಲೆಯನ್ನು 7 – 10 ಪ್ರತಿಶತಕ್ಕೆ ಏರಿಕೆ ಮಾಡಲಿದೆ. ಕಳೆದ 20 ವರ್ಷಗಳಲ್ಲಿ ಕಂಪನಿಯು ವಾರ್ಷಿಕವಾಗಿ ತನ್ನ ಉತ್ಪನ್ನಗಳ ಬೆಲೆಯಲ್ಲಿ ವಾರ್ಷಿಕವಾಗಿ 3 ಪ್ರತಿಶತಕ್ಕಿಂತ ಅಧಿಕ ದರ ಏರಿಕೆ ಮಾಡಿರಲಿಲ್ಲ. ಇನ್ನು ಬರ್ಗರ್ ಪೇಂಟ್ಸ್ ತನ್ನ ಉತ್ಪನ್ನಗಳ ಬೆಲೆಯನ್ನು 10 ಪ್ರತಿಶತ ಏರಿಕೆ ಮಾಡಲಿದೆ. ಇಂಡಿಗೋ ಪೇಂಟ್ಸ್ ದರ 8-9 ಪ್ರತಿಶತ ಏರಿಕೆ ಕಾಣಲಿದೆ.
ಜಾಗತಿಕವಾಗಿ ಪೇಂಟ್ಗಳ ದರದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಡುಲ್ಯಕ್ಸ್ ಬ್ರ್ಯಾಂಡ್ ಈಗಾಗಲೇ 9 ಪ್ರತಿಶತ ದರ ಏರಿಕೆ ಮಾಡಿತ್ತು. ಇದೀಗ ಮತ್ತೆ 5-6 ಪ್ರತಿಶತ ದರ ಏರಿಕೆ ಮಾಡಿದೆ.